ಮಡಿಕೇರಿ:
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ನೆಫ್ರೋಲಜಿ ತಜ್ಞ ವೈದ್ಯರ ನೇಮಕ ಮಾಡಲಾಗಿದೆ. ಡಾ. ಎಂ.ಎನ್. ಆತೀಶ್ (ಡಿ.ಎಂ ನೆಫ್ರೋಲಜಿ) ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರನ್ನು ನೇಮಿಸಲಾಗಿದ್ದು ಪ್ರತಿ ವಾರದ ಬುಧವಾರ ನೆಫ್ರೋಲಜಿ ಕ್ಲೀನಿಕ್ ಅನ್ನು ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.
ಜಿಲ್ಲೆಯಲ್ಲಿ ಮೂತ್ರಪಿಂಡ ಸಂಬAಧಿತ ಸಮಸ್ಯೆ ಇರುವವರು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು ಹಾಗೂ ನೆಫ್ರೋಲಜಿಗೆ ಸಂಬAಧಿತ ಯಾವುದೇ ಸಮಸ್ಯೆಗಳಿದಲ್ಲಿ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಈ ದಿನಗಳಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆಗೆ ಭೇಟಿ ನೀಡಿ ಸದುಪಯೋಗಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋದಕ ಆಸ್ಪತ್ರೆಯಲ್ಲಿ ನೆಫ್ರೋಲಜಿ ತಜ್ಞ ವೈದ್ಯರು ಸೇರಿದಂತೆ ತಜ್ಞರ ವೈದ್ಯರ ಕೊರತೆ ಬಗ್ಗೆ ಈ ಹಿಂದೆ ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.