ಮಂಗಳೂರಿನ: ಎಕ್ಸ್‌ಪರ್ಟ್ ಪಿಯು ಕಾಲೇಜಿಗೆ ಕೇಂದ್ರ ಸರ್ಕಾರದ ಎನ್‌ಇಪಿ 2020 ಕರಡು ಸಮಿತಿ ಸದಸ್ಯ, ವಿದ್ಯಾ ಭಾರತಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಿ.ರಾಮಕೃಷ್ಣ ರಾವ್ ಗುರುವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಆಧುನಿಕ ಜಗತ್ತಿಗೆ ಶಿಕ್ಷಣದ ಪ್ರಾಮುಖ್ಯತೆ ಹಾಗೂ ಬದಲಾವಣೆಯ ಕುರಿತು ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಎಕ್ಸ್‌ಪರ್ಟ್ ಶಿಕ್ಷಣ ಸಮೂಹದ ಅಧ್ಯಕ್ಷ ಪ್ರೊ.ನರೇಂದ್ರ ಎಲ್ ನಾಯಕ್, ಉಪಾಧ್ಯಕ್ಷೆ ಉಷಾಪ್ರಭಾ ಎನ್.ನಾಯಕ್, ನಿರ್ದೇಶಕ (ಐಟಿ) ಅಂಕುಶ್ ಎನ್.ನಾಯಕ್, ಐಸಿಎಐ ಮಾಜಿ ಅಧ್ಯಕ್ಷ ಸಿಎ ಎಸ್.ಎಸ್.ನಾಯಕ್, ಹರ್ಷವರ್ಧನ್, ಜಯಪ್ರಕಾಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿಎ ಎಸ್‌ಎಸ್ ನಾಯಕ್ ರಚಿತ ವರ್ಡ್ಸ್ ಆಫ್ ದಿ ವೈಸ್, ಮೋರ್ ವರ್ಡ್ಸ್ ಆಫ್ ದಿ ವೈಸ್ ಹಾಗೂ ವೈಸ್ ವರ್ಡ್ಸ್ ಆಫ್ ದಿ ವೈಸ್ ಮೂರು ಪುಸ್ತಕಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು.