ಬ್ರಹ್ಮಾವರ: ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಸ್ಥಾನ ಕಾಡೂರು ಬೊಮ್ಮ ಮೂಲಕ್ಷೇತ್ರದಲ್ಲಿ ಪ್ರಥಮ ಬಾರಿಗೆ ದೈವಗಳ ನೇಮೋತ್ಸವ ಶನಿವಾರ ಮತ್ತು ಭಾನುವಾರ ಶ್ರೀ ವಾಣಿಪ್ರೌಢಶಾಲಾ ಆವರಣದಲ್ಲಿ ಜರುಗಿತು.
ಶನಿವಾರ ಸಂಜೆ ಕಾಡೂರು ಬೊಮ್ಮ ಮೂಲಕ್ಷೇತ್ರದಲ್ಲಿ ಮತ್ತು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಪೂಜೆ ನಡೆದು ಬಳಿಕ ದೈವಗಳ ಭಂಡಾರವನ್ನು ಮೆರವಣಿಗೆಯಲ್ಲಿ ಮಹಾ ಚಪ್ಪರಕ್ಕೆ ತರಲಾಯಿತು. ಬಳಿಕ ಬಬ್ಬುಸ್ವಾಮಿ ನೇಮ, ತನ್ನಿಮಾನಿಗ ನೇಮ ಜರುಗಿತು. ಭಾನುವಾರ ಜುಮಾದಿ ಬಂಟ ದೈವಗಳ ನೇಮ, ಮಹಾ ಗುಳಿಗ ದೈವದ ನೇಮ, ಕೊರಗಜ್ಜ ದೈವದ ನೇಮ ಜರುಗಿತು. ನೇಮೋತ್ಸವದ ನಾನಾ ಸೇವಾಕರ್ತರು, ದಾನಿಗಳು, ಭಕ್ತರು ಭಾಗವಹಿಸಿದ್ದರು.