ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೋಮವಾರ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗುರುಪ್ರಸಾದ್ ಕೆ. ಮಾತನಾಡಿ, ವರದಿ ವರ್ಷದಲ್ಲಿ 19 ಸದಸ್ಯರು ಸೇರ್ಪಡೆಗೊಂಡು ಪ್ರಸ್ತುತ 287 ಸದಸ್ಯರನ್ನು ಸಂಘ ಹೊಂದಿದೆ. 57,900 ರೂ. ಪಾಲು ಬಂಡವಾಳ ಹೊಂದಿದೆ. ದಿನಕ್ಕೆ ಸರಾಸರಿ 1100 ಲೀ. ಹಾಲು ಸಂಗ್ರಹವಾಗುತ್ತಿದ್ದು, ವರ್ಷದಲ್ಲಿ 4.31 ಲಕ್ಷ ಲೀ. ಹಾಲು ಸಂಗ್ರಹಿಸಲಾಗಿದೆ. 21.48 ಲಕ್ಷ ರೂ. ಆದಾಯ ಬಂದಿದ್ದು ಖರ್ಚು-ವೆಚ್ಚ ಕಳೆದು 3.45 ಲಕ್ಷ ರೂ. ಲಾಭಾಂಶ ಬಂದಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ಹಾಗೂ ಪ್ರತಿ ಲೀ. ಹಾಲಿಗೆ 36 ಪೈಸೆ ಬೋನಸ್ ನೀಡಲಾಗುವುದು ಎಂದರು.
ಸಂಘದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮಾಹಿತಿ ನೀಡಿದರು. ನಿರ್ದೇಶಕರಾದ ವೆಂಕಪ್ಪ ನಾಯ್ಕ, ಕಾಂತಪ್ಪ ಗೌಡ, ಜಯರಾಮ್ ಬಿ, ದಯಾನಂದ ಎಚ್, ಉಮೇಶ್ ಪಿ, ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿ, ಸಂಘದ ಸದಸ್ಯರಾದ ಕೆ.ವಿ.ವ್ಯಾಸ, ಜಯರಾಮ್ ಶೆಟ್ಟಿ ಗೌರಿಜಾಲ್, ಬಾಲಕೃಷ್ಣ ಬಾಣಜಾಲ್, ಪ್ರಶಾಂತ್, ರವಿಚಂದ್ರ ಹೊಸವಕ್ಲು, ಜಯಾನಂದ ಬಂಟ್ರಿಯಾಲ್ ಮೊದಲಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಹೇಮಂತ್ ಕುಮಾರ್ ಸ್ವಾಗತಿಸಿದರು. ನಳಿನಾಕ್ಷಿ ಪ್ರಾರ್ಥಿಸಿದರು. ಕಾರ್ಯದರ್ಶಿ ಅನುರಾಧಾ ಹೊಸವಕ್ಳು ವರದಿ ನೀಡಿದರು. ಮಹಾಬಲ ಶೆಟ್ಟಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಸಿಬ್ಬಂದಿ ಪರಮೇಶ್ವರ, ಗಿರಿಜ, ಜಯರಾಮ್, ವಿಜಯ್, ಜಯಂತಿ ಸಹಕರಿಸಿದರು.