ಜಿಲ್ಲೆ

ನೆಲ್ಯಹುದಿಕೇರಿಯಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಶಿಬಿರ

reportermys

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಮಹಿಳೋದಯ ಮಹಿಳಾ ಒಕ್ಕೂಟ ಹಾಗೂ ನಬಾರ್ಡ್ ಸಂಯುಕ್ತಾಶ್ರಯದಲ್ಲಿ ನೆಲ್ಯಹುದಿಕೇರಿ ಓಡಿಪಿ ಸಂಸ್ಥೆ ಕಚೇರಿಯಲ್ಲಿ ಕಿರು ಉದ್ಯಮಶೀಲತೆ ಅಭಿವೃದ್ಧಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ. ಹಕೀಂ ಉದ್ಘಾಟಿಸಿದರು.

ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುವಂತಾದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಪ್ರತಿಯೊಂದು ವಸ್ತುಗಳಿಗೂ ಬೆಲೆ ದುಬಾರಿಯಾಗುತ್ತಿರುವ ಈ ಸಂದರ್ಭ ಬದುಕು ಸಾಗಿಸಲು ಮಹಿಳೆಯರ ಆರ್ಥಿಕ ಸ್ಥಿತಿ ಕೂಡ ಪ್ರಮುಖವಾಗಲಿದೆ ಎಂದು ಹಕೀಂ ಹೇಳಿದರು.

ದೇಶದಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಯಲ್ಲಿದೆ. ಹಾಗಾಗಿ ಪರಿಸರ ಸ್ನೇಹಿ ಪೇಪರ್ ಬ್ಯಾಗ್ ತಯಾರಿಕೆ ಕಲಿತು, ಹೆಚ್ಚು ಪೇಪರ್ ಬ್ಯಾಗ್ ತಯಾರಿಕೆ ಮಾಡಬೇಕೆಂದರು.

ಓಡಿಪಿ ಸಂಸ್ಥೆ ಮೈಸೂರು ಸಂಯೋಜಕಿ ಲಲಿತಾ ಮಾತನಾಡಿ, ೩೦ ಶಿಬಿರಾರ್ಥಿಗಳಿಗೆ ೧ ತಿಂಗಳು ತರಬೇತಿ ನೀಡಲಾಗುವುದು. ಶಿಬಿರಾರ್ಥಿ ಗಳು ತಪ್ಪದೆ ಶಿಬಿರದಲ್ಲಿ ಪಾಲ್ಗೊಂಡು ಸ್ವ ಉದ್ಯೋಗಿಗಳಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದರು.

ಓಡಿಪಿ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮಿನೇಜಸ್, ಯೂನಿಟ್ ಸಂಯೋಜಕ ಚೇತಕ್, ನೆಲ್ಯಹುದಿಕೇರಿ ಗ್ರಾಪಂ ಸದಸ್ಯೆ ಸಿಂಧು, ಹೊಲಿಗೆ ಶಿಕ್ಷಕಿ ರಾಧ ಮತ್ತಿತರರು ಇದ್ದರು.