ನೆಲಮಂಗಲ: ಮಕ್ಕಳ ಶಾಲಾ ಶುಲ್ಕದ ವಿಚಾರವಾಗಿ ಪೋಷಕರಿಂದ ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಗಲಾಟೆಯಾದ ಘಟನೆ ಬೆಂ.ಗ್ರಾ. ನೆಲಮಂಗಲ ನಗರದ ವಾಗ್ದೇವಿ ವಿಲಾಸ್ ಶಾಲೆಯಲ್ಲಿ ನಡೆದಿದೆ.
ಸಿಲಬಸ್ ಕಂಪ್ಲೀಟ್ ಆಗದೇ ಫೀಜ್ ಕಟ್ಟುವಂತೆ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಸೂಚಿಸಿದ್ದರಿಂದ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ಶೇಕಡಾ 75% ಅಡ್ಮೀಷನ್ ಫೀಜ್ ಕಂತು ಕಟ್ಟಿದ್ರೆ, ಇನ್ನೂ ಕಟ್ಟದ ಕೆಲ ಪೋಷಕರಿಗೆ ಒತ್ತಡ ಹಾಕಿದ್ದಾರೆ. ಇದೇ 24 ನೇ ಪರೀಕ್ಷೆ ನಡೆಯಲಿದೆ. ಶೇಕಡ 100 % ಅಡ್ಮೀಷನ್ ಫೀಜ್ನಲ್ಲಿ 70 % ಕಟ್ಟಬೇಕು, ಉಳಿದ 30 % ಲಾಕ್ ಡೌನ್ ಹಿನ್ನಲೆ ರಿಯಾಯಿತಿ,
ಈ ಆಫರ್ ಬೇಡ, ಖಾಸಗಿ ಶಾಲೆಗಳಲ್ಲಿ ಮ್ಯಾನೇಜ್ ಮಾಡಲು ತೊಂದರೆಯಾಗುತ್ತೆಂದು ಶಾಲಾ ಆಡಳಿತ ಮಂಡಳಿ ತಿರಸ್ಕರಿಸಿದೆ.
ಸಮಸ್ಯೆ ಬಗೆಹರಿಸದಿದ್ದರೆ ಶಾಲಾ ಆಡಳಿತ ಮಂಡಳಿಯನ್ನು ಹೊರಹಾಕಿ ಗೇಟ್ಗೆ ಬೀಗ ಜಡಿಯುವುದಾಗಿ ಫೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಭೇಟಿ ನೀಡಿ ಪೋಷಕರ ಮನವೊಲಿಸುವ ಯತ್ನ ನಡೆಸಿದರು.