health camp 
ಜಿಲ್ಲೆ

ಆರೋಗ್ಯ ಶಿಬಿರಗಳ ಲಾಭ ಪಡೆಯಿರಿ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗ್ರಾಮೀಣ ಭಾಗದ ಜನರು ಆರೋಗ್ಯ ಚಿಕಿತ್ಸಾ ಶಿಬಿರಗಳ ಪ್ರಯೋಜನ ಪಡೆದುಕೊಂಡು ಉತ್ತಮ ಆರೋಗ್ಯ ಕಾಪಡಿಕೊಳ್ಳಬೇಕು ಎಂದು ಜ್ಯುಪಿಟರ್ ಆಸ್ಪತ್ರೆ ಮುಖ್ಯಸ್ಥ ಡಾ.ಆರ್.ಮುರಳೀಧರ್ ಹೇಳಿದರು.
ನಗರಸಭೆ ವ್ಯಾಪ್ತಿಯ ಭಿನ್ನಮಂಗಲ ಬಳಿಯ ಜ್ಯುಪಿಟರ್ ಆಸ್ಪತ್ರೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವಿತಾವಧಿಯ ಪ್ರಮಾಣ ಕಡಿಮೆಯಾಗುತ್ತಿದ್ದು, ಉತ್ತಮ ಬೆಳವಣಿಗೆಯಲ್ಲ. ಗ್ರಾಮೀಣ ಭಾಗದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಿದ್ದು, ಉಚಿತ ಆರೋಗ್ಯ ಚಿಕಿತ್ಸಾ ಶಿಬಿರಗಳ ಸದ್ಬಳಕೆ ಮಾಡಿಕೊಳ್ಳಬೇಕು. ಅಡ್ಡಪರಿಣಾಮವಿಲ್ಲದ ಯೋಗ, ಧ್ಯಾನ ಹಾಗೂ ಪೌಪ್ಠಕಾಂಶಯುಕ್ತ ಆಹಾರ ಸೇವಿಸಬೇಕು ಎಂದರು.
ಶಿಬಿರದಲ್ಲಿ ಬಿಪಿ, ಮೂಳೆಗಳ ಪರೀಕ್ಷೆ, ಡಯಾಬಿಟಿಸ್, ಕುತ್ತಿಗೆ, ತಲೆನೋವು, ಕೆಮ್ಮು, ದಮ್ಮು, ಅಜೀರ್ಣ, ಸಕ್ಕರೆ ಕಾಯಿಲೆ, ಕಣ್ಣಿನ ಪರೀಕ್ಷೆ, ಚರ್ಮರೋಗ ಕುರಿತಂತೆ ತಪಾಸಣೆ ನಡೆಯಿತು. 150 ಕ್ಕೂ ಹೆಚ್ಚು ಜನ ಶಿಬಿರದ ಪ್ರಯೋಜನ ಪಡೆದುಕೊಂಡರು.