ಜಿಲ್ಲೆ

ನಿಖಿಲ್ ಕಟ್ಟಿ ಹಾಕಲು ಕ್ಷೇತ್ರದಲ್ಲಿ ಬೀಡು ಬಿಟ್ಟ ಸರ್ಕಾರ ; ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

ರೇಷ್ಮೆ ನಗರ ಡೆಸ್ಕ್

 ರಾಮನಗರ : ಒಬ್ಬ ಯುವಕನನ್ನು ಕಟ್ಟಿ ಹಾಕಲು ಚನ್ನಪಟ್ಟಣದಲ್ಲಿ ಸರ್ಕಾರದ ಸಚಿವರು ದಂಡೆತ್ತಿ ಬಂದಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣದ ವಿವಿಧ ಕ್ಷೇತ್ರದಲ್ಲಿ ನಿಖಿಲ್ ಪರವಾಗಿ ಪ್ರಚಾರ ನಡೆಸಿ ಮಾತನಾಡಿ, ನಿಖಿಲ್ ಅವರನ್ನು ಕಟ್ಟಿ ಹಾಕಲು ಮುಖ್ಯಮಂತ್ರಿ, ಡಿಸಿಎಂ ಬಂದಿದ್ದಾರೆ, ಹದಿನೈದಕ್ಕೂ ಹೆಚ್ಚು ಸಚಿವರು, ಮೂವತ್ತಕ್ಕೂ ಹೆಚ್ಚು ಶಾಸಕರು ದಂಡೆತ್ತಿ ಬಂದಿದ್ದಾರೆ. ಆದರೆ, ಜನರು ನಮ್ಮ ಜತೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರಕ್ಕೆ ನಾನು ಮಾಡಿರುವ ಕೆಲಸಗಳ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಾರೆ. ಅವರಿಗೆ ಕಣ್ಣಿಲ್ಲವೇ? ಪ್ರತಿ ಹಳ್ಳಿಯಲ್ಲಿಯೂ 8 ರಿಂದ 10 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾರ್ಯಗಳು ಆಗಿವೆ. ಇವಾವುದೂ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲ್ಸ ಕಣ್ಣಿಗೆ ಕಾಣಲ್ಲವೇ?

ಕಾಂಕ್ರೀಟ್ ರೋಡ್, ಹೈವಾಸ್ಟ್ ಲೈಟ್ ಕೊಟ್ಟಿದ್ದೇನೆ, ಸಾಕಷ್ಟು ಮೂಲಸೌಕರ್ಯ ಕಲ್ಪಿಸಿದ್ದೇನೆ. ಬೆಂಗಳೂರಿನಲ್ಲೂ ಇಂತಹ ಉತ್ತಮ ರಸ್ತೆಗಳಿಲ್ಲ. ಕೇವಲ 810 ಹಳ್ಳಿಗೆ ಅಷ್ಟೆ ಕೆಲಸ ಆಗಿಲ್ಲ. ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಿದೆ. ಎಷ್ಟು ಕೊಳವೆಬಾವಿ ಕೊಟ್ಟಿದ್ದೇವೆ ಎನ್ನುವುದಕ್ಕೆ ಲೆಕ್ಕ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಲೂಟಿ ಹಣ ಕೊಟ್ರೆ ಉಪಯೋಗ ಏನು?

ಈಗ ಟಿಸಿ ಹಾಕಿಸೋಕೆ 2.5 ಲಕ್ಷ ರೂ. ಬೇಕು. ಜನರ ದುಡ್ಡು ಕಿತ್ಕೊಂಡು 2 ಸಾವಿರ ರೂ. ಕೊಟ್ಟರೆ ಏನು ಪ್ರಯೋಜನ? ಮುಂದೆ ಈ ಸರ್ಕಾರ ದಿವಾಳಿ ಆಗೋದ್ರಲ್ಲಿ ಅನುವಾನ ಇಲ್ಲ. ರಸ್ತೆ ಗುಂಡಿ ಮುಚ್ಚೋಕೆ ಇವರ ಬಳಿ ಹಣ ಇಲ್ಲ. ಹಾಲಿನ ಪ್ರೋತ್ಸಾಹ ಧನ ಕೊಟ್ಟು ಎಷ್ಟು ದಿನ ಆಯಿತು?. ಪಶು ಆಹಾರ ಖರೀದಿಸಬೇಕೆಂದರೆ ರೈತರ ಕಷ್ಟ ಎಷ್ಟಿದೆ? ಜನರ ದುಡ್ಡನ್ನೇ ಜನರಿಗೆ ಕೊಡದೆ ಹೋದರೆ ಹೇಗೆ ಬದುಕೋದು? ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಟೋಪಿ ಹಾಕಿ ಹೋದರು

ಯೋಗೇಶ್ವರ್ ಅವರಿಗೆ ಜೆಡಿಎಸ್‌ನಿಂದ ಕೊಟ್ಟರೂ ನಿಲ್ಲುತ್ತೇನೆ ಎಂದರು. ನಾವು ಕೊಡುತ್ತೇವೆ ಎಂದೆವು. ಆಮೇಲೆ ಬಿಜೆಪಿ ಟಿಕೆಟ್ ಬೇಕು ಅಂದರು. ಅದಕ್ಕೂ ನಾವು ಒಪ್ಪಿಕೊಂಡೆವು. ಸ್ವತಃ ಜೆಪಿ ನಡ್ಡಾ ಅವರೇ ನಿಮ್ಮ ಪಕ್ಷದಿಂದಲೇ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಿ ಎಂದು ಕೇಳಿದರು. ನಾವು ಒಪ್ಪಿಕೊಂಡೆವು. ಆಮೇಲೆ ಈ ವ್ಯಕ್ತಿ ಜೆಡಿಎಸ್ ಟಿಕೆಟ್ ಮೇಲೆ ನಿಲ್ಲಲ್ಲ ಅಂದರು. ಸಂಸದ ಡಾ.ಮಂಜುನಾಥ್ ಅವರನ್ನು ಬಿಜೆಪಿ ಪಕ್ಷದಿಂದಲೇ ನಿಲ್ಲಿಸಿ ಎಂದರು. ಅದಕ್ಕೂ ಒಪ್ಪಿದೆ. ಆಮೇಲೆ ಇವರು ಹೇಳದೆ ಕೇಳದೆ ಕಾಂಗ್ರೆಸ್‌ಗೆ ಹಾರಿದರು ಎಂದು ಕುವಾರಸ್ವಾಮಿ ಕಿಡಿಕಾರಿದರು.

ನನ್ನಿಂದ ನಿಮಗೆ ಅನ್ಯಾಯ ಆಗಿಲ್ಲ. ಒಬ್ಬ ರೈತನ ಜಮೀನಲ್ಲಿ ಇದ್ದ ಬಂಡೆ ಒಡೆದು ಅವನಿಗೆ ಅನ್ಯಾಯ ಮಾಡಿದರು ಅವರು ಎಂದು ಡಿಕೆ ಸಹೋದರರ ಮೇಲೆ ಹರಿಹಾಯ್ದ ಅವರು, ನಾನು ಅವರ ಹಾಗೆ ವಾಡಿಲ್ಲ. ನಿಖಿಲ್ ಕುವಾರಸ್ವಾಮಿಗೆ ಒಂದು ಅವಕಾಶ ಕೊಡಿ. ಈ ಕೆಟ್ಟ ಕಾಂಗ್ರೆಸ್ ಆಡಳಿತಕ್ಕೆ ಅಂಕುಶ ಹಾಕಬಹುದು ಎಂದು ಮನವಿ ವಾಡಿದರು.

ಅವಳಿ ನಗರ ಕನಸು ಶ್ರೀ ನನಸು

ಚನ್ನಪಟ್ಟಣ-ರಾಮನಗರ ಅವಳಿ ನಗರ ಆಗುವ ದಿನಗಳು ದೂರವಿಲ್ಲ. ಬಹತ್ ಕಾರ್ಖಾನೆ ತಂದು ಸ್ಥಳೀಯ ಯುವ ಜನರಿಗೆ ಉದ್ಯೋಗ ಕೊಡುವ ಕೆಲಸ ವಾಡುತ್ತೇನೆ. ಈ ಬಗ್ಗೆ ನಾನು ಹಲವರ ಜತೆ ಸವಾಲೋಚನೆ ನಡೆಸಿದ್ದೇನೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಭಾಗದಲ್ಲಿ ಕೈಗಾರಿಕೆಗಳನ್ನು ತರುವ ಬಗ್ಗೆ ಪ್ರಾವಾಣಿಕ ಪ್ರಯತ್ನ ವಾಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.

ಆನೆ ಕಾಟಕ್ಕೆ ತಾಲೂಕಿನ ಜನರನ್ನು ಪಾರು ಮಾಡಲು ತಡೆಗೋಡೆ ನಿರ್ಮಿಸಲು ರೈಲ್ವೆ ಸಚಿವರ ಬಳಿ ವಾತನಾಡಿದ್ದೇನೆ. ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನಗೂ ಜವಾಬ್ದಾರಿ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು. ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಸೇರಿ ಅನೇಕರು ಸಚಿವರ ಜತೆಯಲ್ಲಿ ಇದ್ದರು.

ದಲಿತ ಸಮುದಾಯದ ಅಭಿವೃದ್ಧಿಗೆ ಇಟ್ಟ ಹಣವನ್ನು ಗ್ಯಾರಂಟಿಗೆ ಹಾಕೊಂಡಿದ್ದಾರೆ. ಸರ್ಕಾರ ಹೊಸದಾಗಿ 1.05 ಲಕ್ಷ ಕೋಟಿ ರೂ. ಸಾಲ ವಾಡಿ ಜನರ ಮೇಲೆ ಹೊರೆ ಹಾಕುತ್ತಿದೆ. ಇದನ್ನು ಸೇರಿಸಿದರೆ ರಾಜ್ಯದ ಒಟ್ಟು ಸಾಲ 7.5 ಲಕ್ಷ ಕೋಟಿ ರೂ. ಆಗುತ್ತದೆ. ಅದನ್ನು ತೀರಿಸೋಕೆ ಜನರ ಜೇಬಿಗೆ ಕೈ ಹಾಕುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ, ಕೇಂದ್ರ ಸಚಿವ