ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢರ ಮಠಕ್ಕೆ ಬಾಲಿವುಡ್ ಚಲನಚಿತ್ರ ನಟಿ ನೇಹಾ ಧೂಪಿಯಾ ಶನಿವಾರ ಭೇಟಿ ಶ್ರೀಗಳ ದರ್ಶಾನಾಶೀರ್ವಾದ ಪಡೆದರು.
ಶ್ರೀ ಸಿದ್ಧಾರೂಢರು ಹಾಗೂ ಶ್ರೀ ಗುರುನಾಥಾರೂಢರ ಮೂರ್ತಿಗೆ ಪುಷ್ಪ ಸಮರ್ಪಿಸಿ ಆರತಿ ಬೆಳಗಿ ನಮಸ್ಕರಿಸಿದರು.
ಶ್ರೀ ಮಠದಿಂದ ನೇಹಾ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಟ್ರಸ್ಟ್ ಕಮಿಟಿ ವೈಸ್ ಚೇರ್ಮನ್ ವಿನಾಯಕ ಘೋಡಕೆ, ಸಿಬ್ಬಂದಿ ಇದ್ದರು.