ತೇರದಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಘೋಷಣೆಯ 7ನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು. ಬಸವರಾಜ ಬಾಳಿಕಾಯಿ, ಬುಜಬಲಿ ಕೆಂಗಾಲಿ, ಪರಪ್ಪ ಹೂಗಾರ, ಮುರಿಗೆಪ್ಪ ಹಣಗಂಡಿ, ಮಗೆಪ್ಪ ತಾರದಾಳ, ಶಂಕರ ಕಬಾಡಗಿ, ರವಿ ಸಲಬನ್ನವರ, ಸಿದ್ದಪ್ಪ ಗಾಡಿವಡ್ಡರ, ಶಿವಪ್ಪ ಖವಾಸಿ, ಬಸು ಹಿಪ್ಪರಗಿ ಮತ್ತಿತರರಿದ್ದರು. 
ಜಿಲ್ಲೆ

ಮೂಲಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷೃ

ತೇರದಾಳ(ಗ್ರಾ): ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸಿ 7 ವರ್ಷ ಕಳೆದರೂ ಮೂಲಸೌಲಭ್ಯ ಹಾಗೂ ಕಚೇರಿ ಒದಗಿಸಲು ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಆಸಕ್ತಿ ತೋರಿಸದಿರುವುದು ನೋವನ್ನುಂಟು ಮಾಡಿದೆ ಎಂದು ಕ್ರಾಂತಿವೀರ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ ತಿಳಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಘೋಷಣೆಯ 7ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಾಡಧ್ವಜಾರೋಹಣ ನಡೆಸಿ ಮಾತನಾಡಿದ ಅವರು, ತಾಲೂಕು ಘೋಷಣೆಯಾದ ನಂತರ ಹೋರಾಟ ಸಮಿತಿಯಿಂದ ಅನೇಕ ಬಾರಿ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ಮೂಲಸೌಕರ್ಯ ಒದಗಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದರು.

ಇತ್ತೀಚೆಗೆ ತಾಲೂಕು ಕಚೇರಿಗೆ ಬೇಕಾದ ಹಲವು ವಸ್ತು ಒದಗಿಸಲಾಗಿದೆ ಎಂದು ತಿಳಿದು ಸಂತೋಷವಾಯಿತು. ಮತಕ್ಷೇತ್ರದಿಂದ ಅಧಿಕಾರ ಪಡೆದಿರುವ ಎಲ್ಲ ಪಕ್ಷದ ರಾಜಕಾರಣಿಗಳು ತಾಲೂಕಿಗೆ ಅವಶ್ಯವಿರುವ ಕಚೇರಿ ತರುವಲ್ಲಿ ಶ್ರಮವಹಿಸಿ, ಋಣ ತೀರಿಸುವ ಪ್ರಯತ್ನ ಮಾಡಬೇಕು ಎಂದರು.

ಬುಜಬಲಿ ಕೆಂಗಾಲಿ, ಪರಪ್ಪ ಹೂಗಾರ, ಮುರಿಗೆಪ್ಪ ಹಣಗಂಡಿ, ಮಗೆಪ್ಪ ತಾರದಾಳ, ಶಂಕರ ಕಬಾಡಗಿ, ರವಿ ಸಲಬನ್ನವರ, ಸಿದ್ದಪ್ಪ ಗಾಡಿವಡ್ಡರ, ಶಿವಪ್ಪ ಖವಾಸಿ, ಬಸು ಹಿಪ್ಪರಗಿ, ಭೀಮಸಿ ಸಪ್ತಸಾಗರ, ಸಿದ್ದಪ್ಪ ತೆಳಗಿನಮನಿ, ಈರಪ್ಪ ಹಂದಿಗುಂದ, ಅಶೋಕ ಕಾಂಬಳೆ, ಪರಪ್ಪ ಗುಮ್ಮನ್ನವರ, ಅವ್ವಪ್ಪ ನೀಲನ್ನವರ, ಮಹಮ್ಮದ ಜಮಖಂಡಿ, ರಾಮಗೊಂಡ ಪಾಟೀಲ, ಸಿದ್ದರಾಜ ಉಳಗೊಂಡ, ಬಸು ನಿಂಬಿಕಾಯಿ ಮತ್ತಿತರರಿದ್ದರು.