ನಿರ್ವಹಣೆ ಕಾಣದೇ ಇರುವ ವೆಂಟೆಡ್ ಡ್ಯಾಂಗಳ ಪಕ್ಷಿನೋಟ 
ಜಿಲ್ಲೆ

ನಿರ್ವಹಣೆಯಿಲ್ಲದೆ ಡ್ಯಾಂಗಳು ನೀರವ

ವಿಜಯವಾಣಿ ಸುದ್ದಿಜಾಲ ಬೈಂದೂರು

ಗ್ರಾಮೀಣ ಭಾಗಗಳ ರೈತರಿಗೆ ಕೃಷಿ ಚಟುವಟಿಕೆಗೆಗೆ ಸಹಕಾರಿಯಾಗಬೇಕು ಮತ್ತು ಸಮುದ್ರ ಸೇರುವ ನದಿಗಳ ನೀರಿಗೆ ತಡೆಯೊಡ್ಡಿ ಅಂತರ್ಜಲವೃದ್ಧಿ ಜತೆಗೆ ನೀರಾವರಿ ಅನುಕೂಲಕ್ಕೆ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ನೂರಾರು ವೆಂಟೆಡ್ ಡ್ಯಾಂ ನಿರ್ಮಿಸಿದೆ. ಆದರೆ ಈ ಎಲ್ಲ ವೆಂಟೆಡ್ ಡ್ಯಾಂಗಳು ಉದ್ಘಾಟನೆಗಷ್ಟೆ ಸೀಮಿತವಾಗಿದೆ. ಬಹುತೇಕ ಕಿಂಡಿ ಅಣೆಕಟ್ಟುಗಳು ನಿರ್ವಹಣೆ ಕಾಣದೆ ನೀರವವಾಗಿದೆ. ಬೈಂದೂರು ಕ್ಷೇತ್ರದ ಕೊಲ್ಲೂರು, ಕಾಲ್ತೋಡು, ಉಪ್ಪುಂದ, ಬಿಜೂರು, ಯಡ್ತರೆ ಗ್ರಾಮದ ತೂದಳ್ಳಿ, ಹಡವಿನಗದ್ದೆ, ಶಿರೂರು ಗ್ರಾಮದ ಸಂಕದಗುಂಡಿ ಹಾಗೂ ಪೇಟೆ ಮುಂತಾದ ಕಡೆ ಕೋಟ್ಯಂತರ ರೂ. ಅನುದಾನದಲ್ಲಿ ವೆಂಟೆಡ್ ಡ್ಯಾಂ ನಿರ್ಮಿಸಲಾಗಿದೆ. ಈ ಭಾಗದ ರೈತರು ಹಲವು ವರ್ಷಗಳ ಹೋರಾಟದ ಬಳಿಕ ಜನಪ್ರತಿನಿಧಿಗಳ ಸಹಕಾರದಿಂದ ಡ್ಯಾಂ ನಿರ್ಮಾಣವಾಗಿದೆ.

ಮಾಹಿತಿ ಕೊರತೆ

ಇತ್ತೀಚೆಗೆ ನಿರ್ಮಾಣವಾದ ವೆಂಟೆಡ್ ಡ್ಯಾಂಗಳು ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಹೊಂದಿದೆ. ಆದರೆ ಸ್ಥಳೀಯರಿಗೆ ಮಾಹಿತಿ ಕೊರತೆ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ನಿರ್ವಹಣೆ ಕೊರತೆ ಕಂಡಿದೆ. ನಿರ್ಮಾಣವಾಗಿ ಒಂದೆರಡು ವರ್ಷದಲ್ಲಿ ನದಿ ನೀರಿನ ರಭಸ, ಮರದ ಕೊಂಬೆಗಳು ಬಡಿದು ಡ್ಯಾಂ ಬಾಗಿಲು ತೆಗೆಯಲಾರದ ಪರಿಸ್ಥಿತಿಯಿದೆ.

ಕಳಪೆ ಕಾಮಗಾರಿ

ಸುಬ್ಬರಾಡಿ ಡ್ಯಾಂಗೆ ಕೋಟ್ಯಂತರ ಅನುದಾನ ವೆಚ್ಚ ಮಾಡಲಾಗಿದೆ. ಆದರೆ ರೈತರಿಗೆ ಉಪಯೋಗವಾಗದೆ ಸಂಪೂರ್ಣ ಕಳಪೆಯಾಗಿರುವುದಾಗಿ ಸ್ಥಳೀಯರ ಅಭಿಪ್ರಾಯ. ಇದರಿಂದ ನೂರಾರು ಕೋಟಿ ರೂ. ವೆಚ್ಚದ ವೆಂಟೆಡ್ ಡ್ಯಾಂಗಳು ಅನುದಾನ ಬಳಕೆಗಷ್ಟೆ ಉಪಯೋಗವಾಗುತ್ತಿದೆ. ಇನ್ನು ಕೆಲವು ಕಡೆ ಕಾಲುವೆ ಮೂಲಕ ನೀರು ಹಾಯಿಸುವ ಯೋಜನೆಯಿದ್ದರೂ ಹೂಳು ತುಂಬಿ ಒಂದೇ ವರ್ಷದಲ್ಲಿ ಕಾಲುವೆ ತುಂಬಿಹೋಗಿದೆ. ಪ್ರತಿವರ್ಷ ಗ್ರೀಸಿಂಗ್ ಮಾಡದೆ ಮತ್ತು ನಿರ್ವಹಣೆ ಕೊರತೆಯಿಂದ ಬಹುತೇಕ ಡ್ಯಾಂನ ಕಬ್ಬಿಣದ ಹಲಗೆಗಳು ಮೇಲೆಳುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕಳಪೆ ವೆಂಟೆಡ್ ಡ್ಯಾಂಗಳ ಕುರಿತು ಮಾಧ್ಯಮಗಳು ನಿರಂತರ ವರದಿ ಪ್ರಕಟಿಸಿದ ಪರಿಣಾಮ ಇಲಾಖೆ ಈ ಬಗ್ಗೆ ಗಮನಹರಿಸಿದೆ. ಮಾತ್ರವಲ್ಲದೆ ಹಡವಿನಗದ್ದೆ, ಶಿರೂರು, ತೂದಳ್ಳಿ ಮುಂತಾದ ಕಡೆ ರಿಪೇರಿ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಕೃಷಿಕರಿಗೆ ಒಂದಿಷ್ಟು ಅನುಕೂಲವಾಗಲಿದ್ದು, ವೆಂಟೆಡ್ ಡ್ಯಾಂ ಸಮಸ್ಯೆಯಿಂದ ನೀರು ಶೇಖರಣೆಯಾಗುತ್ತಿದೆ. ಕೃಷಿ ಕಾರ್ಯ ಕೈಬಿಟ್ಟ ಕೃಷಿಕರ ಬದುಕಿಗೆ ಅಧಿಕಾರಿಗಳ ಸ್ಪಂದನೆ ಒಂದಿಷ್ಟು ಸಮಾಧಾನ ತಂದಿದೆ.

ಇನ್ನು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸದೇ ಇರುವುದರಿಂದ ನದಿ, ಉಪನದಿಗಳ ನೀರು ಸಮುದ್ರ ಸೇರುತ್ತಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಬೇಕು. ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಗ್ರಾಪಂಗಳು ಸೇರಿ ನಗರಾಡಳಿತ ಸಂಸ್ಥೆಗಳು ಇದರ ಬಗ್ಗೆ ಮುತುವರ್ಜಿ ವಹಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಇರುವ ಕಿಂಡಿ ಅಣೆಕಟ್ಟಿಗೆ ಸರಿಯಾಗಿ ಹಲಗೆ ಹಾಕಿದೆ ಇರುವುದು ಅಥವಾ ಸಂಬಂಧಪಟ್ಟವರು ನಿರ್ವಹಣೆ ಮಾಡದೇ ಇರುವುದು ಕಂಡುಬಂದಿದೆ. -ಗುರುರಾಜ್ ಗಂಟೆಹೊಳೆ ಶಾಸಕ ಕರಾವಳಿ ಭಾಗದಲ್ಲಿ ಅತ್ಯುತ್ತಮ ವೆಂಟೆಡ್ ಡ್ಯಾಂ ನಿರ್ಮಾಣವಾಗಿದೆ. ಗ್ರಾಪಂ ಹಾಗೂ ಸ್ಥಳೀಯರ ಆಸಕ್ತಿ ಕೊರತೆಯಿಂದ ಮತ್ತು ಸಮರ್ಪಕ ಮಾಹಿತಿ ಕೊರತೆಯಿಂದ ನಿರ್ವಹಣೆ ಕುರಿತು ಸಮಸ್ಯೆ ಕಂಡುಬರುತ್ತಿದೆ. ಆದರೆ ಮಾಹಿತಿ ದೊರೆತ ತಕ್ಷಣ ಇಲಾಖೆ ರಿಪೇರಿ ಕಾರ್ಯ ನಡೆಸಿ ರೈತರಿಗೆ ಅನೂಕೂಲ ಮಾಡಿಕೊಟ್ಟಿದೆ. ತಾಲೂಕಿನ ಎಲ್ಲ ವೆಂಟೆಡ್ ಡ್ಯಾಂಗಳ ಸ್ಥಳ ಪರಿಶೀಲನೆ ನಡೆಸಿ ದುರಸ್ತಿ ಮಾಡಲಾಗಿದೆ. -ನಾಗರಾಜ್ ಇಂಜಿನಿಯರ್ ಸಣ್ಣ ನೀರಾವರಿ ಇಲಾಖೆ https://www.vijayavani.net/koraga-culture-unveiled https://www.vijayavani.net/awarded-to-hattiangadi-residential-school