ಜ್ಯೋತಿಬಾಯಿ 
ಜಿಲ್ಲೆ

ಕರ್ತವ್ಯಲೋಪ, ನಾಗಲಾಪುರ ಪಿಡಿಒ ಅಮಾನತು

ಮುದಗಲ್: ಕರ್ತವ್ಯಲೋಪ ಹಿನ್ನೆಲೆಯಲ್ಲಿ ನಾಗಲಾಪುರ ಗ್ರಾಪಂ ಪಿಡಿಒ ಜ್ಯೋತಿಬಾಯಿ ಟಿ. ಅವರನ್ನು ಜಿಪಂ ಸಿಇಒ ರಾಹುಲ್ ಪಾಂಡ್ವೆ ತುಕಾರಾಮ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಗ್ರಾಪಂ ಸಿಬ್ಬಂದಿ ಇ-ಹಾಜರಾತಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಮತ್ತು ಅಧಿಕಾರಿಗಳ ಹಾಜರಾತಿಗಾಗಿ ಪಂಚತಂತ್ರ 2.0 ಎಂಬ ಮೊಬೈಲ್ ಆ್ಯಪ್ ಅನ್ನು ಇಲಾಖೆ ಸಿದ್ಧಪಡಿಸಿದೆ. ಈ ಆ್ಯಪ್ ಮೂಲಕ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಜರಾತಿ ದಾಖಲಿಸಬೇಕು.

ಆದರೆ, ನಾಗಲಾಪುರ ಗ್ರಾಪಂ ಪಿಡಿಒ ಒಂದು ದಿನವೂ ಹಾಜರಾತಿ ನಮೂದಿಸಿಲ್ಲ. ಅಲ್ಲದೆ ಗ್ರಾಮ ಪಂಚಾಯಿತಿಗೆ ಹಾಜರಾಗದೆ ಕರ್ತವ್ಯ ಲೋಪ ಎಸಗಿದ್ದಾರೆ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸದಿರುವುದರಿಂದ ಕರ್ತವ್ಯದಲ್ಲಿ ನಿರ್ಲಕ್ಷೃವಹಿಸಿದ್ದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಜಿಪಂ ಸಿಇಒ ತಿಳಿಸಿದ್ದಾರೆ.