ನಾಲತವಾಡ ಪಟ್ಟಣದ 8ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ವಾಲ್ ಅಳವಡಿಕೆಗಾಗಿ ತೆಗೆದ ತಗ್ಗು ಮುಂಭಾಗ ಜನರು ಪ್ರತಿಭಟಿಸಿದರು. ನಬಿರಸೂಲ ಕಂಚಗಾರ, ಕಾಶೀಮ ಗಂಗೂರ, ಅಜಮೀರ ಖಾಜಿ, ಖಾಜಾಹುಸೇನ ಖಾಜಿ, ಅಲ್ಲಾಭಕ್ಷ ಮೂಲಿಮನಿ ಇತರರಿದ್ದರು. 
ಜಿಲ್ಲೆ

ತೆಗ್ಗು ಮುಚ್ಚಲು ಅಧಿಕಾರಿಗಳ ನಿರ್ಲಕ್ಷ್ಯ

ನಾಲತವಾಡ: ಕುಡಿಯುವ ನೀರಿನ ವಾಲ್ ಅಳವಡಿಸುತ್ತೇವೆಂದು ಬೃಹತ್ ತಗ್ಗು ಅಗೆದು ಅಂದಾಜು 20 ದಿನ ಕಳೆದರೂ ಈವರೆಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಚ್ಚಿಸಿಲ್ಲ. ಅದರಿಂದ ಕ್ರಿಮಿ-ಕೀಟಗಳ ಹಾವಳಿ ಹೆಚ್ಚಾಗಿದ್ದು ತೀವ್ರ ತೊಂದರೆಯಾಗಿದೆ ಎಂದು 8ನೇ ವಾರ್ಡ್‌ನ ನಿವಾಸಿಗಳು ಮಂಗಳವಾರ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಓಣಿಯ ಪ್ರಮುಖರಾದ ನಬಿರಸೂಲ ಕಂಚಗಾರ, ಕಾಶೀಮ ಗಂಗೂರ, ಅಜಮೀರ ಖಾಜಿ, ಖಾಜಾಹುಸೇನ ಖಾಜಿ, ಅಲ್ಲಾಭಕ್ಷ ಮೂಲಿಮನಿ ಮಾತನಾಡಿ, ಹಲವಾರು ದಿನಗಳಿಂದ ಇರುವ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ಬಗೆ ಹರಿಯುತ್ತಿಲ್ಲ. ನೀರು ಸರಬರಾಜು ಮಾಡಿದಾಗಲೇ ಪಡೆಯುವ ಸ್ಥಿತಿ 8ನೇ ವಾರ್ಡ್‌ನಲ್ಲಿದೆ. ಎಷ್ಟೋ ಬಾರಿ ಮನವಿ ಮಾಡಿದರೂ ಪಟ್ಟಣ ಪಂಚಾಯಿತಿಯವರು ಸರಿಯಾಗಿ ನೀರು ಒದಗಿಸುತ್ತಿಲ್ಲ. ರಸ್ತೆ ಮಧ್ಯೆ ತಗ್ಗು ಅಗೆದು ತಿಂಗಳುಗಟ್ಟಲೇ ಸಮಸ್ಯೆ ಸರಿಪಡಿಸದೆ ಬಿಟ್ಟಿದ್ದರಿಂದ ಶಾಲೆ ಮಕ್ಕಳು, ವೃದ್ಧರು, ರೈತರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಸಮಸ್ಯೆ ಸರಿಪಡಿಸಲು ವಿಳಂಬವಾದಲ್ಲಿ ಶಾಸಕ ನಾಡಗೌಡ ಅವರ ಗಮನಕ್ಕೆ ತರುತ್ತೇವೆ ಎಂದು ಎಚ್ಚರಿಸಿದರು.