ಜಿಲ್ಲೆ

ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಲಕ್ಷ್ಯ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಸಂಪೂರ್ಣ ಹಾಳಾಗಿದೆ. ಜಿಲ್ಲೆಯ ಬ್ಯಾಡ್ಮಿಂಟನ್ ಆಟಗಾರರ ಪ್ರತಿಭೆ ಒರೆಗೆ ಹಚ್ಚಲು ವೇದಿಕೆ ಆಗಬೇಕಿದ್ದ ಈ ಕ್ರೀಡಾಂಗಣ ಸಂಪೂರ್ಣ ನಿರ್ಲಕ್ಷö್ಯಕ್ಕೆ ಒಳಗಾಗಿದ್ದು, ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾಗಿದೆ. ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಆರೋಪವೂ ಕೇಳಿಬರುತ್ತಿದೆ.

ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಕ್ರೀಡೆಗೆ ಸರಿಯಾದ ಪ್ರೋತ್ಸಾಹ ಸಿಗುವುದಿಲ್ಲ ಎನ್ನುವುದು ಸಾಮಾನ್ಯ ಮಾತು. ಇದಕ್ಕೆ ಸಾಕ್ಷಿ ಎನ್ನುವಂತೆ ಕ್ರೀಡೆಗೆ ಸಂಬAಧಿಸಿದ ಮೂಲಭೂತ ಸೌಕರ್ಯಗಳನ್ನು ಜಿಲ್ಲೆಗೆ ಕಲ್ಪಿಸುವಲ್ಲಿ ಸರ್ಕಾರಗಳು ನಿರ್ಲಕ್ಷö್ಯ ತೋರಿಸುತ್ತಲೇ ಬಂದಿವೆ. ಕೆಲವೊಂದು ಕಡೆಗಳಲ್ಲಿ ಸ್ಥಳೀಯರ ಸತತ ಪ್ರಯತ್ನದ ಫಲವಾಗಿ ಕ್ರೀಡಾಂಗಣದAಥ ಸವಲತ್ತುಗಳು ಬಂದಿದ್ದರೂ ಅಧಿಕಾರಿಗಳ ಬೇಜಾವಬ್ದಾರಿ, ಅಸಮರ್ಪಕ ನಿರ್ವಹಣೆಯ ಕಾರಣದಿಂದ ಕ್ರೀಡಾಪಟುಗಳ ಬಳಕೆಗೆ ಲಭ್ಯವಾಗದಂತೆ ಆಗಿದೆ. ಮಡಿಕೇರಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಇದಕ್ಕೆ ಇತ್ತೀಚಿನ ಸೇರ್ಪಡೆ ಆಗಿದೆ.

ಮಡಿಕೇರಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಇರುವ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಸಂಪೂರ್ಣವಾಗಿ ದಯನೀಯ ಸ್ಥಿತಿ ತಲುಪಿದೆ. ವಿಶೇಷ ಎಂದರೆ ಯುವಜನ ಮತ್ತು ಕ್ರೀಡಾ ಇಲಾಖೆ ನಿರ್ದೇಶಕರ ಕಚೇರಿ ಇಲ್ಲಿಯೇ ಇದ್ದರೂ ಈ ಸ್ಥಿತಿ ತಲುಪಿರುವುದು ಅಚ್ಚರಿಗೆ ಕಾರಣವಾಗಿದೆ. ಮಳೆಗಾಲದಲ್ಲಿ ಮಡಿಕೇರಿಯ ಮಳೆಗೆ ಕ್ರೀಡಾಂಗಣದ ಸೂರಿನಿಂದ ನೀರು ಜಿನುಗುತ್ತಿರುತ್ತದೆ. ಇದರಿಂದಾಗಿ ಮರದ ನೆಲಹಾಸು ಬಹುತೇಕ ಹಾಳಾಗಿದೆ. ಮಳೆ ನಿಂತ ನಂತರ ತೇವಾಂಶದಿAದಾಗಿ ಆಡಲು ಸಾಧ್ಯವಾಗುತ್ತಿಲ್ಲ.

ಇಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸುಮಾರು 150ಕ್ಕೂ ಹೆಚ್ಚು ಕ್ರೀಡಾಪಟುಗಳು, ಕ್ರೀಡಾಸಕ್ತರು, ಬ್ಯಾಡ್ಮಿಂಟನ್ ಪ್ರೇಮಿಗಳು ಆಟವಾಡಲು ಬರುತ್ತಾರೆ. ಮಾಸಿಕ 500 ರೂ. ಶುಲ್ಕವನ್ನೂ ಪಾವತಿ ಮಾಡಲಾಗಿತ್ತದೆ. ಮಕ್ಕಳಿಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಆಗಾಗ್ಗೆ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನೂ ನಡೆಸಲಾಗುತ್ತಿರುತ್ತದೆ. ಇಷ್ಟಾದರೂ ಈ ಕ್ರೀಡಾಂಗಣದ ಕಳಪೆ ನಿರ್ವಹಣೆ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನೆ ಮಾಡುವಂತಿದೆ.

ಕೆಲವರು ಅನಿವಾರ್ಯವಾಗಿ ಈ ಕ್ರೀಡಾಂಗಣದಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. ಮರದ ನೆಲಹಾಸು ಮೇಲೆ ಟಾರ್ಫಲ್ ಮುಚ್ಚಿದ್ದರೂ ಕೆಳಗೆ ತೇವಾಂಶ ನಿಂತುಕೊAಡಿರುತ್ತದೆ. ಬೆಳ್ಳಂಬೆಳಗ್ಗೆ ಇಲ್ಲಿ ಆಡಲು ಬರುವರು ತಾವೇ ಈ ತೇವಾಂಶ ತೆಗೆದು ಆಟವಾಡುವುದು ಇಲ್ಲಿ ಸಾಮಾನ್ಯವಾಗಿದೆ. ಕೆಲವರು ಇಲ್ಲಿ ಜಾರಿಬಿದ್ದು ಕಾಲು ಗಾಯ ಮಾಡಿಕೊಂಡಿರುವುದೂ ಇದೆ. ಬಹುತೇಕರು ಇತ್ತೀಚೆಗೆ ಇಲ್ಲಿಗೆ ಆಟವಾಡಲು ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಇಲ್ಲಿ ಆಟವಾಡಲು ಶುಲ್ಕ ವಸೂಲಿ ಮಾಡಿದರೂ ಆ ಹಣ ಏನಾಗುತ್ತಿದೆ ಎನ್ನುವ ಪ್ರಶ್ನೆ ಕ್ರೀಡಾ ಪ್ರೇಮಿಗಳಲ್ಲಿ ಎದ್ದಿದೆ. ಈ ಸಂಬAಧ ಈಗಾಗಲೇ ಕ್ರೀಡಾಪ್ರೇಮಿಗಳು ಯುವಜನ ಮತ್ತು ಕ್ರೀಡಾ ಇಲಾಖೆ ನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ನೀಡಿದರೂ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಜಿಲ್ಲೆಗೆ ಕ್ರೀಡೆಯ ಮೂಲಭೂತ ಸವಲತ್ತುಗಳು ಸಿಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಇರುವಾಗ ಸಿಕ್ಕಿರುವ ಸವಲತ್ತನ್ನು ಉಳಿಸಿಕೊಳ್ಳುವಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕಾಳಜಿ ತೋರಿಸಬೇಕು ಎನ್ನುವುದು ಕ್ರೀಡಾಸಕ್ತರ ಒತ್ತಾಸೆಯಾಗಿದೆ.