ಜಿಲ್ಲೆ

ನೀಲಾವರ ದೇವಳಕ್ಕೆ ಧ್ವಜಮರ ಹಸ್ತಾಂತರ

Udupi

ಬ್ರಹ್ಮಾವರ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಧ್ವಜಸ್ತಂಭ ನಿರ್ಮಾಣಕ್ಕಾಗಿ ಮರವನ್ನು ಸುಳ್ಯದಿಂದ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಬ್ರಹ್ಮಾವರದಿಂದ ಕುಂಜಾಲು ಮೂಲಕ ಶನಿವಾರ ತರಲಾಯಿತು.

72 ಅಡಿ ಉದ್ದ ಧ್ವಜಮರವನ್ನು ನೀಲಾವರ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ ಮೂಲಕ ತಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಳಕ್ಕೆ ಹಸ್ತಾಂತರಿಸಲಾಯಿತು.

ಮರದ ದಾನಿಗಳಾದ ವಿಶ್ವನಾಥ ಸನಿಲ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರಘುರಾಮ ಮಧ್ಯಸ್ಥ, ಕಾರ್ಯನಿರ್ವಹಣಾಕಾರಿ ಪ್ರಶಾಂತ್ ಶೆಟ್ಟಿ, ದೇವಳದ ಅರ್ಚಕರಾದ ಕೃಷ್ಣ ಅಡಿಗ, ಚಂದ್ರಶೇಖರ ಅಡಿಗ, ರಾಘವೇಂದ್ರ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಹೇಮಾ ವಿ.ಬಾಸ್ರಿ, ಸದಾಶಿವ ದೇವಾಡಿಗ, ಮಲ್ಲಿಕಾ ಎಸ್.ಶೆಟ್ಟಿ, ರಮೇಶ್ ನಾಯ್ಕ, ಸುರೇಂದ್ರ ಸುವರ್ಣ ಉಪಸ್ಥಿತರಿದ್ದರು.