ಸಿಂಧನೂರು: ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಅಂಗವಿಕಲರಿಗೆ ಶೇ.5 ಅನುದಾನ ಮೀಸಲಿಡುವಂತೆ ಸುತ್ತೋಲೆ ಇದೆ. ಈ ಅನುದಾನದಲ್ಲಿ ಅಂಗವಿಕಲರಿಗೆ, ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯ ಒದಗಿಸಬೇಕಾಗಿದೆ. ಆದರೆ, ಯಾವ ಇಲಾಖೆಯೂ ಅನುಷ್ಠಾನಗೊಳಿಸುತ್ತಿಲ್ಲ.
ಇದನ್ನೂ ಓದಿ: ಅಂಗವಿಕಲರಿಗೂ ಸಮಾಜದಲ್ಲಿ ಗೌರವದ ಜೀವನ
ತಾಲೂಕಿನಲ್ಲಿ 4800 ಜನ ಅಂಗವಿಕಲರು ಇದ್ದಾರೆ. ಸರ್ಕಾರಿ ಕಚೇರಿ, ಗ್ರಾಪಂ, ಶಾಲೆಗಳಲ್ಲಿ ರ‌್ಯಾಂಪ್‌ಗಳನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ನಿಯಮದ ಪ್ರಕಾರ 6 ಅಡಿ ಉದ್ದ, 1 ಅಡಿ ಎತ್ತರ, 3 ಅಡಿ ಅಗಲ ಇರಬೇಕು. ಆದರೆ, ಎಲ್ಲೆಡೆ 1ಅಡಿಗಿಂತ ಎತ್ತರದಲ್ಲಿ ಕಟ್ಟಲಾಗಿದ್ದು, ಜಾರು ಬಂಡಿಯಂತಾಗಿವೆ.
ಗ್ರಾಪಂಗಳಲ್ಲಿ ಅಧ್ಯಕ್ಷ ಮತ್ತು ಸದಸ್ಯರ ಸಭೆಯಲ್ಲಿ ಅಂಗವಿಕಲರಿಗೆ ಮೀಸಲಿಟ್ಟ ಅನುದಾನ ಬಳಕೆ ವಿಷಯದಲ್ಲಿ ಮತ್ತು ಸೌಲಭ್ಯಗಳ ಪೂರೈಕೆಗೆ ಸಂಬಂಧಿಸಿದಂತೆ ಈವರೆಗಿನ ಕೆಲಸ ಇನ್ನೂ ತೃಪ್ತಿದಾಯಕವಾಗಿಲ್ಲ ಎನ್ನುವ ದೂರು ಇದೆ. ಸರ್ಕಾರ ಅಂಗವಿಕಲರಿಗೆ ಶೇ.5 ಮೀಸಲಾತಿ ನೀಡಿದೆ.
ಪ್ರತಿ ಪಂಚಾಯಿತಿಯಲ್ಲಿ 4 ರಿಂದ 5ಲಕ್ಷ ರೂ. ಅನುದಾನವಿದೆ. ಆದರೆ, ಅಧಿಕಾರಿಗಳ ಅಸಡ್ಡೆ ಮತ್ತು ನಿಷ್ಕಾಳಜಿಯಿಂದ ಮೀಸಲಾತಿ ನಮಗೆ ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ. ಕೇವಲ ತ್ರಿಚಕ್ರ ವಾಹನ ನೀಡಿದರೆ, ಸಾಲದು ಇನ್ನುಳಿದ ಬೇಡಿಕೆಗಳನ್ನು ಒದಗಿಸಬೇಕು.
ಅನುಕಂಪ ಬೇಡ ನೆರವಿನ ಅಭಯ ನೀಡಿ. ಶೇ.5 ಅನುದಾನ ನೀಡದೆ ಇರುವ ಇಲಾಖೆ ಕಡತಗಳನ್ನು ಜಿಲ್ಲಾಧಿಕಾರಿ ರದ್ದುಪಡಿಸಬೇಕೆಂಬ ಒತ್ತಡವನ್ನು ಅಂಗವಿಕಲರು ಹಾಕಿದ್ದು ಇದುವರೆಗೆ ಬೇಡಿಕೆ ಪುರಸ್ಕಾರವಾಗಿಲ್ಲ.
ತಾಲೂಕಿನ ಬಸ್ ನಿಲ್ದಾಣ ಸೇರಿ ಎಲ್ಲಿಯೂ ರ‌್ಯಾಂಪ್ ಇಲ್ಲ. ಅಂಗವಿಕಲ ಸ್ನೇಹಿ ಶೌಚಗೃಹ ಇಲ್ಲ. ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಇತರ ಪ್ರಯಾಣಿಕರು ಅಂಗವಿಕಲರಿಗೆ ಸೀಟ್ ಬಿಟ್ಟುಕೊಡುವುದಿಲ್ಲ. ನರೇಗಾ ಯೋಜನೆಯಡಿ ಅಂಗವಿಕಲರಿಗೆ ಪ್ರತ್ಯೇಕ ಜಾಬ್‌ಕಾರ್ಡ್ ನೀಡಿ ಅವರಿಗೆ ಅನುಕೂಲವಾಗುವಂತೆ ಕನಿಷ್ಠ 100 ದಿನದ ಕೆಲಸ ನೀಡುತ್ತಿಲ್ಲ. ನಗರಸಭೆಯಲ್ಲಿ ಅನುದಾನ ದುರುಪಯೋಗವಾಗುತ್ತಿದೆ ಎಂಬ ಬಲವಾದ ಆರೋಪಗಳಿವೆ. ತಾಲೂಕಿನಲ್ಲಿ ಅನೇಕರು ಸೌಲಭ್ಯಗಳಿಂದ ವಂಚಿತವಾಗಿದ್ದು, ಸೂಕ್ತ ಸೌಲಭ್ಯಗಳು ಸಿಕ್ಕಿಲ್ಲ. ಇದರಿಂದಾಗಿ ಸಾಕಷ್ಟು ಜನರು ತೊಂದರೆ ಅನುಭವಿಸುವಂತಾಗಿದೆ. ಎಲ್ಲ ಇಲಾಖೆಗಳಲ್ಲಿ ಶೇ.5 ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಅದರಲ್ಲಿಯೂ ವಿಶೇಷವಾಗಿ ಗ್ರಾಪಂ, ಪಪಂ, ನಗರಸಭೆ ಇದರಲ್ಲಿ ಮತ್ತೆ ವಿಶೇಷವಾಗಿ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವ ದೂರು ಅಂಗವಿಕಲರದ್ದಾಗಿದೆ.
ಸೌಲಭ್ಯ ಮರಿಚೀಕೆ
ಕುರುಕುಂದ ನಿವಾಸಿವೆಂಕಪ್ಪ ಡಂಕನಕಲ್ಅಂಗವಿಕಲರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಗ್ರಾಪಂ, ಪಪಂ ಹಾಗೂ ನಗರಸಭೆಯಲ್ಲಿ ಶೇ.5 ಅನುದಾನವಿದ್ದರೂ, ಎರಡು ವರ್ಷದಿಂದ ಬಳಕೆ ಇಲ್ಲ. ಆಯಾ ಪಂಚಾಯಿತಿಗಳಲ್ಲಿ ಕನಿಷ್ಠವೆಂದರೂ 4ರಿಂದ 7ಲಕ್ಷ ರೂ. ಅನುದಾನವಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ, ಅನುದಾನ ಸದ್ಬಳಕೆಗೆ ಮುಂದಾಗಬೇಕು.ಜಿಲ್ಲಾಧ್ಯಕ್ಷ, ನವ ಕರ್ನಾಟಕ ಎಂಆರ್‌ಡಬ್ಲ್ಯು ರಾಯಚೂರುಮಹ್ಮದ್ ಹುಸೇನ್‌ಸಾಬ ಪರಾಪುರಅಂಗವಿಕಲರಿಗೆ ಸರಿ ಸಮಾನವಾಗಿ ಸರ್ಕಾರದ ಸೌಲಭ್ಯಗಳು ಸಿಗುವಂತೆ ಆಗಬೇಕು. ಯಂತ್ರಚಾಲಿತ ವಾಹನ ವಿತರಣೆ ಮಾಡಿದರೆ ಉಳಿದ ಅಂಗವಿಕಲರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಬೇಕು. ಪಕ್ಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ. ಈ ಮಾದರಿಯನ್ನು ಅನುಸರಿಸಬೇಕು.