ಪುತ್ತೂರು: ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರತಿಜ್ಞೆಯನ್ನು ಸ್ವೀಕರಿಸಬೇಕಾಗಿದೆ. ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡುವುದನ್ನು ತಡೆಯುವ ಜತೆಗೆ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಮಣ್ಣಿನ ನಡುವಿನ ಭಾಂದವ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಸರು ಗದ್ದೆಯಲ್ಲಿ ಒಂದು ದಿನ ಕಳೆಯುವ ಕಾರ್ಯ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಶಶಿಧರ ಶೆಟ್ಟಿ ಹೇಳಿದರು.
ಅವರು ಭಾನುವಾರ ಬಿಲ್ಲಂಪದವು ಕೊರತ್ತಿಗದ್ದೆಯಲ್ಲಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ವತಿಯಿಂದ ನಡೆದ ವಾರ್ಷಿಕ ಕೆಸರುಗದ್ದೆ ಕ್ರೀಡಾಕೂಟ ಮತ್ತು ನೇಜಿ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ರಾಸಾಯನಿಕ ಮುಕ್ತ ಕೃಷಿಯನ್ನು ಮಾಡುವ ಬಗ್ಗೆ ಪ್ರತಿಯೊಬ್ಬರು ಜಾಗೃತವಾಗಬೇಕಾಗಿದೆ. ಸಾವಯವ ಕೃಷಿಯಿಂದ ಪರಿಸರದ ಜೀವ ಸಂಕುಲದ ರಕ್ಷಣೆಯ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಮಕ್ಕಳು ತಮ್ಮ ಜನ್ಮ ದಿನವನ್ನು ಗಿಡ ನೆಡುವ ಮೂಲಕ ಆಚರಿಸುವ ಕಾರ್ಯವಾಬೇಕು. ಮಕ್ಕಳಲ್ಲಿ ಜಾಗೃತಿ ಮೂಡುವುದರಿಂದ ಮುಂದಿನ ದಿನ ಬದಲಾವಣೆಯನ್ನು ಮಾಡಲು ಸಾಧ್ಯ
ಎಂಡೋಸಲ್ಪಾನ್ ಪೀಡಿತರ ಬಾಳಿಗೆ ಬೆಳಕಾದ ಸಾಮಾಜಿಕ ಹೋರಟಗಾರ ಸಂಜೀವ ಕಬಕ ಅವರಿಗೆ ರಾಷ್ಟ್ರೀಯ ಪರಿಸರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಡಿಕೆಕೊಲು ಹಾಗೂ ಔಷಧಿ ಸಿಂಪಡಣೆ ಮಾಡುವ ಜತೆಗೆ ಭತ್ತದ ಗದ್ದೆ ಬಿತ್ತನೆಯಲ್ಲಿ ೪೫ ವರ್ಷಗಳ ಸೇವೆಯನ್ನು ಮಾಡುತ್ತಿರುವ ನಾರಾಯಣ ಮೂಲ್ಯ ಎರುಂಬು, ಸಾವಯವ ತರಕಾರಿ ಕೃಷಿಯ ಜತೆಗೆ ಬೀಜಗಳ ಸಂರಕ್ಷಣೆ ಮಾಡುತ್ತಿದ್ದ ನಾರಾಯಣ ಭಟ್ ಬಿ. ಅವರನ್ನು ಸನ್ಮಾನಿಸಲಾಯಿತು.
ನಿಧಿ ಶೋಧ, ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಕೆಸರುಗದ್ದೆ ರಿಲೆ, ಮಡಕೆ ಒಡೆಯುವುದು, ಕಬಡ್ಡಿ, ಮಕ್ಕಳ ಹಿಮ್ಮುಖ ನಡಿಗೆ, ಮಕ್ಕಳ ಚೆಂಡು ಎಸೆತ, ಗಂಡ ಹೆಂಡತಿ ಓಟ ನಡೆಯಿತು. ಗದ್ದೆಯಲ್ಲಿ ನೇಜಿಯನ್ನು ನಾಟಿ ಮಾಡುವ ಮೂಲಕ ಅನುಭವವನ್ನು ಪಡೆಯಲಾಯಿತು.
ಎನ್.ಇ.ಸಿ.ಎಫ್. ಮಂಗಳೂರು ಹಿರಿಯ ಮಾರ್ಗದರ್ಶಕ ದಿನೇಶ್ ಹೊಳ್ಳ, ಜಾನಸ್ ಬಜ್ಪೆ, ಸಂಘಟನಾ ಕಾರ್ಯದರ್ಶಿ ಹರೀಶ್ ರಾಜ್ ಕುಮಾರ್, ಉದಯ ಆಚಾರ್, ನಾಗರಾಜ್, ಪದ್ಮನಾಭ ಮಯ್ಯ, ಸ್ನೇಕ್ ಕಿರಣ್, ನಾಗರಾಜ್ ಸೆಟ್, ಗಗನ್ ಶೆಟ್ಟಿ, ಜೋನತನ್, ಪುತ್ತೂರು ಘಟಕದಅಧ್ಯಕ್ಷ ದಿನೇಶ್ ಹೆಗ್ಡೆ, ಕಾರ್ಯದರ್ಶಿ ವೆಂಕಟರಮಣ ಪುಣಚ, ವಸಂತ ನಾಯಕ್ ಆಜೇರು, ಯೋಗೀಶ್ ಕಾಶಿಮಠ, ಮಹೇಶ್ ಗೌಡ, ಅಶೋಕ್ ಅಡ್ಯಂತಾಯ, ರೋಶನ್ ಪುಣಚ ಉಪಸ್ಥಿತರಿದ್ದರು.