ಶಿರಹಟ್ಟಿ: ಪಟ್ಟಣದ ಮೇಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ ಪ್ರಗತಿ ಸಾಧಿಸುವುದರ ಜತೆಗೆ ಹೆಚ್ಚಿನ ಮಕ್ಕಳ ಸಂಖ್ಯೆ ಹೊಂದಿದ್ದರಿಂದ ಶಾಲೆಗೆ ಅಗತ್ಯ ಮೂಲ ಸೌಕರ್ಯ ಒದಗಿಲು ಅನುದಾನ ನೀಡಲಾಗುತ್ತದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಭರವಸೆ ನೀಡಿದರು.
ಪಿಆರ್‌ಇಡಿ ಮತ್ತು ಪಿಡಬ್ಲುೃಡಿ ಇಲಾಖೆಯಿಂದ ವಿವೇಕ ಯೋಜನೆಯಡಿ ನಿರ್ಮಿಸಲಾದ ಹೆಚ್ಚುವರಿ ಶಾಲಾ ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲು ಶಿಕ್ಷಕರು ವೃತ್ತಿ ಪಾವಿತ್ರ್ಯ ಕಾಪಾಡಿಕೊಂಡು ಅಧ್ಯಯನಶೀಲತೆ ಮೈಗೂಡಿಸಿಕೊಂಡು ಆಸಕ್ತಿ ಯಿಂದ ಮಕ್ಕಳ ಮನ ಮುಟ್ಟುವಂತೆ ಬೋಧನೆ ಮಾಡಬೇಕು. ಪಾಲಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.
ಶಿರಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷ ವಿ.ವಿ. ಕಪ್ಪತ್ತನವರ, ಬಿ.ಡಿ. ಪಲ್ಲೇದ, ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ಡಾ. ಟಿ.ಎಂ. ಮಹೇಂದ್ರಕರ, ನಾಗರಾಜ ಲಕ್ಕುಂಡಿ, ಯಲ್ಲಪ್ಪ ಇಂಗಳಗಿ, ಗೂಳಪ್ಪ ಕರಿಗಾರ, ಬಸವಣ್ಣೆಪ್ಪ ತುಳಿ, ಅಕ್ಬರ ಯಾದಗೀರ, ಶಿವಪ್ಪ ಕಲ್ಯಾಣಿ, ಅಶೋಕ ವರವಿ, ರಾಮು ಕಂಬಳಿ, ಬಸವರಾಜ ಚಿಕ್ಕತೋಟದ, ಬಿಇಒ ಜಿ.ಎಂ. ಮುಂದಿನಮನಿ, ಎಇಇ ಜ್ಯೋತಿ ಬಿ.ಕೆ, ಎಇಇ ಮಾರುತಿ ರಾಥೋಡ, ಮುಖ್ಯೋಪಾಧ್ಯಾಯ ಎಚ್.ವೈ. ಹೊಸಮನಿ ಇದ್ದರು.