ಮೈಸೂರು: ಕಾಂಗ್ರೆಸ್ ಅಡ್ಡದಾರಿ ಹಿಡಿದು ಸರ್ಕಾರ ರಚಿಸುವ ಕಸರತ್ತು ಮಾಡಬಹುದು. ಆದರೆ, ಎನ್‌ಡಿಎಗೆ ಸ್ಪಷ್ಟ ಬಹುಮತ ಬಂದಿದ್ದು, ಎನ್‌ಡಿಎ ಸರ್ಕಾರ ರಚನೆ ಆಗಲಿದೆ ಎಂದು ಶಾಸಕರು ಆದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಭದ್ರಕೋಟೆಯಾದ ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿ ಕಡಿಮೆ ಸೀಟುಗಳು ಬಂದಿವೆ. ಆದರೂ ಎನ್‌ಡಿಎ ಸರ್ಕಾರ ರಚಿಸಲಿದೆ ಎಂದರು.
ರಾಜ್ಯದಲ್ಲಿ 135 ಶಾಸಕರಿದ್ದರೂ, 5 ಗ್ಯಾರಂಟಿಗಳು ಜಾರಿಗೊಳಿಸಿದ್ದರೂ ಮೈತ್ರಿ 19 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಗ್ಯಾರಂಟಿಗಳ ಮೌಲ್ಯ ಕಳೆದುಕೊಳ್ಳುವಂತೆ ಮತದಾನದ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದರು.