ಜಿಲ್ಲೆ

ಎನ್​ಡಿಎ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಸೋಮಲಿಂಗ ತಳವಾರ

ದೊಡವಾಡ: ಗ್ರಾಮದ ಶ್ರೀ ಸಂಗಮೇಶ್ವರ ಪಿಕೆಪಿಎಸ್​ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎನ್​ಡಿಎ ಬೆಂಬಲಿತ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಿತು.

ತನ ನಿರ್ದೇಕರಾಗಿ ನಿಂಗಪ್ಪ ಚೌಡನ್ನವರ, ಬಸವರಾಜ ಮುರಗೋಡ, ಅಜ್ಜಪ್ಪ ಪಟಾತ, ಗುರುನಾಥ ಕಾರಕೂನ, ಗದಿಗೆಪ್ಪ ದೊಡ್ಡಮನಿ, ಲಕ್ಕಪ್ಪ ಅಲಕ್ಕನವರ, ಗಿರೀಶ ಧಾರವಾಡ, ಲಲಿತಾ ಹತ್ತಿಕಟಗಿ, ಪಾರ್ವತಿ ಮುದೆನ್ನವರ ಹಾಗೂ ಸ್ವತಂತ್ರರಾಗಿ ಸಂಗಮೇಶ ಅಂದಾನಶೆಟ್ಟಿ, ರಾಮಲಿಂಗಪ್ಪ ಯರಿಕಿತ್ತೂರ, ಮಡಿವಾಳಪ್ಪ ಕರಿಗಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಹೆಗಡೆ ಘೋಷಿಸಿದರು. ಜೆಡಿಎಸ್​ ಜಿಲ್ಲಾಧ್ಯ ಶಂಕರ ಮಾಡಲಗಿ ಇತರರಿದ್ದರು.