ಚಿಕ್ಕೋಡಿ: ಶಿಕ್ಷಣದ ವ್ಯವಸ್ಥೆ ಆಧುನೀಕರಣಗೊಳಿಸುವಲ್ಲಿ ಎನ್‌ಸಿಇಆರ್‌ಟಿ ಪಾತ್ರ ಅಮೋಘ ಎಂದು ಎಸ್.ಬಿ.ಪಾಟೀಲ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅರುಣ ಕುಮಾರ ಜೋಶಿ ಹೇಳಿದರು.
ಪಟ್ಟಣದಲ್ಲಿ ಈಚೆಗೆ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಶಿಕ್ಷಣದಲ್ಲಿ ಎನ್‌ಸಿಆರ್‌ಟಿ ಪಾತ್ರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎನ್‌ಸಿಇಆರ್‌ಟಿಯು ಕಲಿಕೆ ಸರಳೀಕರಣ ಮಾಡಿದ್ದು, ಶಿಕ್ಷಣದ ಗುಣಾತ್ಮಕ ಸಮಗ್ರ ಬೆಳವಣಿಗೆಯಲ್ಲಿ ಡಿಜಿಟಲ್ ಶಿಕ್ಷಣದಲ್ಲಿ ಕ್ರಾಂತಿ ಮಾಡಿದೆ. ಇ-ಪಾಠಶಾಲಾ, ವರ್ಚುವಲ್ ಲ್ಯಾಬ್, ದೀಕ್ಷಾ ಇನ್ನಿತರ ಆನ್‌ಲೈನ್ ಸೌಲಭ್ಯಗಳು ವಿದ್ಯಾರ್ಥಿ ಮತ್ತು ಶಿಕ್ಷಕರ ಸಾಮರ್ಥ್ಯ ಹೆಚ್ಚಿಸಿದೆ. ಇದರ ಸದುಪಯೋಗ ಪಡೆಯಬೇಕು ಪ್ರಶಿಕ್ಷಣಾರ್ಥಿಗಳಿಗೆ ಕರೆ ಕೊಟ್ಟರು.
ಪ್ರಾಧ್ಯಾಪಕ ಡಾ.ಹೊಂಬಯ್ಯ ಹೊನ್ನಲಗೇರಿ ಮಾತನಾಡಿದರು. ಡಾ.ಕನಕಾಚಲ ಕನಕಗಿರಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಇಂದಿರಾ ಮೈತ್ರಿ, ಶಿಕ್ಷಕ ಆಸಮ ಜಮಾದಾರ, ಪ್ರಾಧ್ಯಾಪಕ ಡಾ.ಎನ್.ಎಸ್ ಶಿಂಧೆ, ಸುಜಾತ ಚಂದ್ಗಡೆ ಇತರರಿದ್ದರು.