ಕಿಕ್ಕೇರಿ: ಶಿಸ್ತು, ಸಂಯಮ, ಸಮಯಪ್ರಜ್ಞೆ ಕಲಿಸುವ ಎನ್‌ಸಿಸಿ ವಿದ್ಯಾರ್ಥಿಗಳಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸೋಮವಾರ ಏರ್‌ಫೋರ್ಸ್ ಎನ್‌ಸಿಸಿ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಬಾಲ್ಯವಿವಾಹದ ಅರಿವು ಮೂಡಿಸಬೇಕಿದೆ. ಉನ್ನತ ವ್ಯಾಸಂಗ, ಉದ್ಯೋಗಕ್ಕೆ ಸುಲಭವಾಗಿ ಸೇರಲು ಎನ್‌ಸಿಸಿ ಉಪಯೋಗವಾಗಿದೆ. ವಿಶೇಷ ಕೃಪಾಂಕ ಈ ವಿದ್ಯಾರ್ಥಿಗಳಿಗೆ ಇದ್ದು, ಪರೇಡ್‌ಗಳಲ್ಲಿ ವಿಶೇಷ ತರಬೇತಿ ಪಡೆಯುವ ಮಕ್ಕಳಿಗೆ ನೀಡುವ ಅರ್ಹತಾ ಪತ್ರ ಉಪಯೋಗಕರವಾಗಲಿದೆ. ವಿದ್ಯಾರ್ಥಿ ದಿಸೆಯಲ್ಲಿ ರಾಷ್ಟ್ರಾಭಿಮಾನ, ಸ್ವಾಭಿಮಾನ ಮೂಡಲಿದ್ದು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಸಾರ್ಜೆಂಟ್ ಸುಧಾನ್ಸು ಗೋಯಲ್ ಹಾಗೂ ಸಾರ್ಜೆಂಟ್ ರಂಜನ್ ಅವರು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಹಾಗೂ ಸಂದರ್ಶನವನ್ನು ನಡೆಸಿ ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಎನ್‌ಸಿಸಿ ಅಧಿಕಾರಿ ಎಸ್.ಎಂ.ಬಸವರಾಜು, ಶಿಕ್ಷಕ ಬಿ.ಎನ್. ಪರಶಿವಮೂರ್ತಿ. ಮಹಮ್ಮದ್ ರಿಜ್ವಿ, ನಂದಿನಿ, ರಾಗಿಣಿ ಚಂದ್ರೇಗೌಡ ಇದ್ದರು.