ಕಿಕ್ಕೇರಿ ಸರ್ಕಾರಿ ಕೆಪಿಎಸ್ ಪ್ರೌಢಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆಯಲಿರುವ ಎನ್‌ಸಿಸಿ ತರಬೇತಿಗೆ ಈಚೆಗೆ ತೆರಳಿದಾಗ ಶಿಕ್ಷಕ ಸಮೂಹ ಶುಭ ಕೋರಿದರು. ಚಲುವನಾರಾಯಣಸ್ವಾಮಿ, ಎಸ್.ಎಂ. ಬಸವರಾಜು, ಶಿಕ್ಷಕರು ಹಾಜರಿದ್ದರು. 
ಜಿಲ್ಲೆ

ಉನ್ನತ ವ್ಯಾಸಂಗಕ್ಕೆ ಎನ್‌ಸಿಸಿ ಅರ್ಹತೆ ಮುಖ್ಯ

ನಾಗೇಶ ಎಸ್

ಕಿಕ್ಕೇರಿ: ಎನ್‌ಸಿಸಿಗೆ ಸೇರುವುದು, ಕ್ಯಾಂಪ್‌ಗಳಲ್ಲಿ ಭಾಗವಹಿಸುವಿಕೆಯಿಂದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚಲಿದೆ ಎಂದು ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಕೆಪಿಎಸ್ ಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳು ಇತ್ತೀಚೆಗೆ ಮೈಸೂರಿನಲ್ಲಿ ನಡೆಯುವ ಏರ್‌ಪೋರ್ಸ್ ಎನ್‌ಸಿಸಿ ಕ್ಯಾಂಪ್‌ಗೆ ಇತ್ತೀಚೆಗೆೆ ತೆರಳಿದವರಿಗೆ ಶುಭಕೋರಿ ಮಾತನಾಡಿದ ಅವರು, ದೇಶಪ್ರೇಮ, ಶಿಸ್ತು, ಶ್ರದ್ಧೆಯ ನಾಯಕತ್ವ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳಿ. ಉನ್ನತ ವ್ಯಾಸಂಗ, ಉದ್ಯೋಗಕ್ಕೆ ಸುಲಭವಾಗಿ ಸೇರಲು ಎನ್‌ಸಿಸಿ ಉಪಯೋಗವಾಗಿದೆ. ವಿಶೇಷ ಕೃಪಾಂಕ ಈ ವಿದ್ಯಾರ್ಥಿಗಳಿಗೆ ಇದ್ದು, ಪೆರೇಡ್‌ಗಳಲ್ಲಿ ವಿಶೇಷ ತರಬೇತಿ ಪಡೆಯುವ ಮಕ್ಕಳಿಗೆ ನೀಡುವ ಅರ್ಹತಾ ಪತ್ರ ಉಪಯೋಗಕರವಾಗಲಿದೆ. ವಿದ್ಯಾರ್ಥಿ ದಿಸೆಯಲ್ಲಿ ರಾಷ್ಟ್ರಾಭಿಮಾನ, ಸ್ವಾಭಿಮಾನ ಮೂಡಲಿದ್ದು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿ ಹೇಳಿದರು. ಶಾಲಾ ಶಿಕ್ಷಕ ವೃಂದದವರು ಇದ್ದರು.