ಕೋಟ: ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ ಬ್ರಹ್ಮಾವರ ಸಂಘದ ವತಿಯಿಂದ ಸಮಾಜ ಬಾಂಧವರಿಗಾಗಿ ಸಾಂಸ್ಕೃತಿಕ ಕಲರವ- 2025 ಸ್ಪರ್ಧಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಪ್ರಭಾಕರ ನಾಯರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಉಡುಪಿ ಅರಣ್ಯ ಇಲಾಖೆಯ ಅಧಿಕಾರಿ ವಾರಿಜಾಕ್ಷಿ ನಾಯರಿ, ಸಂಘದ ಗೌರವಾಧ್ಯಕ್ಷರಾದ ಸಿ.ಮಂಜುನಾಥ ನಾಯರಿ, ವಿ.ಶಿವಕುಮಾರ್ ನಾಯರಿ, ಸಿ.ಎಂ.ರಾಮಚಂದ್ರ ನಾಯರಿ ಕಾರ್ತಟ್ಟು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ವಿಜಯ್ ಕೆ.ನಾಯರಿ ಸ್ವಾಗತಿಸಿದರು. ಕೋಶಾಧಿಕಾರಿ ಜಯರಾಮ್ ನಾಯರಿ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷ ಮರಳೀಧರ ನಾಯರಿ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ನಾಯರಿ ವಿಜೇತರಿಗೆ ಬಹುಮಾನ ವಿತರಿಸಿದರು. ಸಮಾಜದ ಹಿರಿಯರಾದ ಸದಾಶಿವ ನಾಯರಿ ಮಣಿಪಾಲ, ಸುರೇಶ್ ನಾಯರಿ ಬೆಂಗಳೂರು, ಸಂಘದ ಗೌರವ ಅಧ್ಯಕ್ಷ ಲಿಂಗಯ್ಯ ನಾಯರಿ, ನಿತ್ಯಾನಂದ ನಾಯರಿ, ದಿನೇಶ್ ನಾಯರಿ, ಚಂದ್ರಶೇಖರ್ ನಾಯರಿ ಉಪಸ್ಥಿತರಿದ್ದರು.