ಜಿಲ್ಲೆ

ಪುಣ್ಯಕ್ಷೇತ್ರದಲ್ಲಿ ಬಿಲ್ವಪ್ರಿಯನಿಗೆ ಪೂಜೆ

ನಾಯಕನಹಟ್ಟಿ: ಪುಣ್ಯಕ್ಷೇತ್ರ ನಾಯಕನಹಟ್ಟಿಯಲ್ಲಿ ಬಿಲ್ವಪ್ರಿಯ ಶಿವನನ್ನು ರಾತ್ರಿಯಿಡೀ ಭಜಿಸಿ ಭಕ್ತರು ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಿದರು.

ಮಧ್ಯಾಹ್ನದಿಂದಲೇ ಕ್ಷೇತ್ರದ ರಥಬೀದಿಯಲ್ಲಿನ ಈಶ್ವರ ದೇವಸ್ಥಾನ, ತಿಪ್ಪೇಸ್ವಾಮಿಗಳ ತಪೋಭೂಮಿ ಏಕಾಂತೇಶ್ವರ ಮಠ, ಶಾಂತಲಿಂಗೇಶ್ವರ ದೇವಸ್ಥಾನಗಳಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು. ಸಂಜೆ ಈಶ್ವರ ದೇವಸ್ಥಾನ, ಶಾಂತಲಿಂಗೇಶ್ವರ ದೇವಸ್ಥಾನಗಳಲ್ಲಿ ಶಿವನಿಗೆ ಅಭಿಷೇಕ ನೆರವೇರಿಸಲಾಯಿತು.