ಜಿಲ್ಲೆ

ಹಟ್ಟಿ ಜಾತ್ರೆ ವ್ಯಾಪಾರಿಗಳು ಸ್ಥಳಾಂತರ

Chitradurga

ನಾಯಕನಹಟ್ಟಿ: ಕರೊನಾ ವೈರಸ್ ಪರಿಣಾಮ ಪಟ್ಟಣದಲ್ಲಿ ಸೋಮವಾರ ನಡೆಯಬೇಕಿದ್ದ ವಾರದ ಸಂತೆಯನ್ನು ರದ್ದು ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಭೂತಪ್ಪ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಜಾತ್ರೆ, ಸಂತೆ ನಡೆಯಬಾರದೆಂದು ಸರ್ಕಾರ ನಿರ್ದೇಶನ ನೀಡಿದೆ. ಜಾತ್ರೆ ನಿಮಿತ್ತ ಬಂದಿದ್ದ ಕುಮಾರೇಶ್ವರ ನಾಟಕ ಕಂಪನಿ ಮಾಲೀಕರಿಗೆ ಪ್ರದರ್ಶನ ನೀಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಶನಿವಾರದಿಂದಲೇ ಎಲ್ಲ ಜಾತ್ರಾ ವ್ಯಾಪಾರಿಗಳನ್ನು ಪಟ್ಟಣದಿಂದ ಖಾಲಿಯಾಗುವಂತೆ ನಿರ್ದೇಶನ ನೀಡಿದ್ದು, ಎಲ್ಲ ವ್ಯಾಪಾರಸ್ಥರು ತೆರಳಿದ್ದಾರೆ. ಶೇ.90 ಅಂಗಡಿಗಳು ಮುಚ್ಚಿದ್ದು, ಉಳಿದ ಅಂಗಡಿಗಳು ಮುಚ್ಚುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪಿಎಸ್‌ಐ ರಘುನಾಥ್ ಇದ್ದರು.