ಜಿಲ್ಲೆ

ಕಾವಲು ಹನುಮಪ್ಪನಿಗೆ ವಿಶೇಷ ಪೂಜೆ

ನಾಯಕನಹಟ್ಟಿ: ಸಮೀಪದ ಗುಂತಕೋಲಮ್ಮನಹಳ್ಳಿ ಬಳಿಯ ರೇಖಲಗೆರೆಯಲ್ಲಿರುವ ಕಾವಲು ಆಂಜನೇಯ ಸ್ವಾಮಿಗೆ ಶ್ರಾವಣ ಮಾಸದ ಮೊದಲ ಶನಿವಾರ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರವನ್ನು ಮಾಡಲಾಗಿತ್ತು.

ಬೆಳಗ್ಗೆಯಿಂದಲೇ ಭಕ್ತರ ದಂಡು ದೇವಸ್ಥಾನಕ್ಕೆ ಹರಿದು ಬರುತ್ತಿತ್ತು. ತೊರೆಕೋಲಮ್ಮನಹಳ್ಳಿ ಕೆ.ಎಲ್.ರಾಮದಾಸ್ ಅವರಿಂದ ಅನ್ನಸಂತರ್ಪಣೆ ದಾಸೋಹ ಏರ್ಪಡಿಸಲಾಗಿತ್ತು.

ಕೊಂಡಿಕಾರ್ ವಂಶಸ್ಥರಿಂದ ಅಭಿಷೇಕ ಪೂಜೆ, ಪ್ರಸಾದ ವಿತರಣೆ ಮಾಡಲಾಯಿತು.

ದೇಗುಲದ ಬಳಿ ಇರುವ ನಾಗ ಸುಬ್ರಮಣ್ಯ ದೇವರಿಗೆ ಅಭಿಷೇಕ ಮಾಡಲಾಯಿತು. ಕೂಡ್ಲಿಗಿ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಭಕ್ತರು ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ದೇವಸ್ಥಾನ ಸಮಿತಿಯವರು, ಸುತ್ತಮುತ್ತಲಿನ ನೂರಾರು ಭಕ್ತರು ಹಾಜರಿದ್ದರು.