ಜಿಲ್ಲೆ

ಲಾಕ್‌ಡೌನ್ ಸವಾಲಾಗಿ ಸ್ವೀಕರಿಸಿ

Chitradurga

ನಾಯಕನಹಟ್ಟಿ: ಕರೊನಾ ವೈರಸ್ ಜಗತ್ತನ್ನು ಆವರಿಸಿಕೊಳ್ಳುತ್ತಿದ್ದು, ಆಪತ್ತು ಕಾಲವಾಗಿ ಪರಿಣಮಿಸಿದೆ. ಜನತೆ ಇದನ್ನು ಸವಾಲಾಗಿ ಸ್ವೀಕರಿಸಿ ರೋಗವನ್ನು ಹಿಮ್ಮೆಟ್ಟಿಸಬೇಕೆಂದು ಭೋವಿ ಮಠದ ಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಮುತ್ತಾಲಮ್ಮ ದೇವಸ್ಥಾನದ ಬಳಿ ಸೋಮವಾರ ಅಲಕ್ಷಿತ ಸಮುದಾಯಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು.

ಅತಿವೃಷ್ಟಿ, ಅನಾವೃಷ್ಟಿಗಿಂತಲೂ ಭೀಕರವಾಗಿ ಕಾಡುತ್ತಿರುವ ಕೋವಿಡ್-19 ಎಂಬ ವಿಚಿತ್ರ ಕಾಯಿಲೆ ತೊಲಗಿಸಲು ಎಲ್ಲರೂ ಪಣತೊಡಬೇಕು. ನಿರ್ಲಕ್ಷೃ ವಹಿಸದೆ ಸದಾ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಪತ್ರಕರ್ತ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಲಾಕ್‌ಡೌನ್ ಪರಿಣಾಮ ವೃತ್ತಿನಿರತ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನೆರವು ಕಲ್ಪಿಸುವುದು ನಾಗರಿಕ ಸಮಾಜದ ಜವಾಬ್ದಾರಿ ಎಂದರು.

ರಾಜ್ಯ ಅಲಕ್ಷಿತ ಸಮುದಾಯಗಳ ಮಹಾ ವೇದಿಕೆ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ, ಪತ್ರಕರ್ತ ಎಚ್.ಲಕ್ಷ್ಮಣ ಮಾತನಾಡಿದರು. ಪಪಂ ಸದಸ್ಯ ಉಮಾಪತಿ, ನಗರಸಭೆ ಮಾಜಿ ಸದಸ್ಯ ಲಿಂಗರಾಜು, ಅಲಕ್ಷಿತ ಸಮುದಾಯದ ಮುಖಂಡ ಎನ್.ಟಿ.ನಾಗರಾಜ್, ರಾಮಣ್ಣ ಇದ್ದರು.