ಜಿಲ್ಲೆ

ನಕ್ಸಲ್​ ಶರಣಾಗತಿಯಲ್ಲಿ ಸರ್ಕಾರದ ಸಂಶಯಾಸ್ಪದ ನಡೆ

ಉಡುಪಿ: ನಕ್ಸಲ್​ ನಾಯಕ ವಿಕ್ರಂ ಗೌಡ ಎಂಕೌಂಟರ್​ ಬಗ್ಗೆ ಸ್ಥಳಿಯರಿಗೆ ಸಂಶಯಗಳಿವೆ. ಶರಣಾದವರು ಕಾಡಿನ ಯಾವುದೋ ಒಂದು ಮೂಲೆಯಲ್ಲಿ ಶಸ್ತ್ರಾಸ್ರಗಳನ್ನು ತೋರಿಸಿದ್ದಾರೆ. ಈ ಬಗ್ಗೆ ಜನರಿಗೆ ನಂಬಿಕೆ ಬರುತ್ತಿಲ್ಲ. ಎಲ್ಲವೂ ಸಂಶಯಾಸ್ಪದವಾಗಿದೆ ಎಂದು ಮಾಜಿ ಪೊಲೀಸ್​ ಅಧಿಕಾರಿ, ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರು ಶರಣಾಗಿ ಸಾಮಾನ್ಯ ಜೀವನ ನಡೆಸುವುದು ಶರಣಾಗತಿ ಪಾಲಿಸಿಯ ಉದ್ದೇಶ. ಜಿಲ್ಲಾಧಿಕಾರಿ ಎಸ್ಪಿ ಸಮ್ಮುಖದಲ್ಲಿ ಶರಣಾಗತಿ ಆಗುವುದು ಪದ್ಧತಿ. ಆದರೇ ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿಯೇ ಶರಣಾಗತಿಯಾಗಿರುವುದು, ಶರಣಾಗತಿ ವಿಧಾನದ ಸಮಗ್ರತೆ ಬಗ್ಗೆ ಸಂಶಯ ಮೂಡುತ್ತದೆ. ಸರ್ಕಾರವೇ ನಕ್ಸಲರಿಗೆ ಸುಲಭವಾಗಿ ವ್ಯವಸ್ಥೆ ಮಾಡಿಕೊಟ್ಟಂತೆ ಕಾಣುತ್ತಿದೆ ಎಂದರು.

--ಚಪ್ಪಲಿ ಧರಿಸುವುದಿಲ್ಲ

ತಮಿಳುನಾಡಿನಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚುತ್ತಿದೆ. ಡಿಎಂಕೆ ಸರ್ಕಾರದ ಅವಧಿಯಲ್ಲಿ ಅಣ್ಣಾ ಯುನಿವರ್ಸಿಟಿ ಒಳಗೆ ಅತ್ಯಾಚಾರವಾಗಿದೆ. ದಿನಂಪ್ರತಿ ಸಹೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದ್ದರಿಂದ ಡಿಎಂಕೆ ಸರ್ಕಾರ ಅಧಿಕಾರದಿಂದ ಇಳಿಯುವ ತನಕ ನಾನು ಚಪ್ಪಲಿ ಧರಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.

ತಮಿಳುನಾಡುನಲ್ಲಿ 2026 ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಎಂಟು ಪಕ್ಷಗಳಿವೆ, ಬಿಜೆಪಿಗೆ ಬೆಂಬಲ ಸಿಗಬೇಕು ಎಂದು ಗ್ರಾಮ ಮಟ್ಟದಲ್ಲಿ ಶ್ರಮಿಸುತ್ತಿದ್ದೇವೆ. ಪ್ರಧಾನಿ ಮೋದಿ ಬಗ್ಗೆ ಒಳ್ಳೆಯ ಇಮೇಜ್​ ಇದೆ. ಸ್ಥಳಿಯ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ. ನಮ್ಮ ಪ್ರಯತ್ನ 2026ರಲ್ಲಿ ಗೆಲುವಾಗಿ ಮಾರ್ಪಡುತ್ತದೆ ಎಂಬ ವಿಶ್ವಾಸವಿದೆ ಎಂದರು.

--ರಾಜಕೀಯ ಸಿನೆಮಾ ಬೇರೆ

ತಮಿಳುನಾಡಿನಲ್ಲಿ ಸಿನಿಮಾ ಸ್ಟಾರ್​ಗಳಿಗೆ ಬೆಂಬಲ ಇರೋದು ನಿಜ. ವಿಜಯ್​ ಪೆಬ್ರವರಿ ತಿಂಗಳಲ್ಲಿ ಪಕ್ಷ ಸ್ಥಾಪನೆ ಮಾಡಿದ್ದಾರೆ, ಆದರೇ ಇದುವರೆಗೆ ಅವರಿಗೆ ಪಕ್ಷಕ್ಕೆ ಜಿಲ್ಲಾಧ್ಯಕ್ಷರನ್ನೂ ನೇಮಕ ಮಾಡಲಿಕ್ಕಾಗಿಲ್ಲ. ಅವರು ಅಲ್ಲಿ ನಂಬರ್​ ಒನ್​ ನಟ, ಆದರೆ ರಾಜಕೀಯ ಬೇರೆ ಸಿನಿಮಾ ಬೇರೆ, ರಾಜಕೀಯ ಕಷ್ಟ ಇದೆ. ಮುಂದಿನ ಈ ಚುನಾವಣೆಯಲ್ಲಿ ಏನಾಗುತ್ತೆ ನೋಡೋಣ ಎಂದು ಹೇಳಿದರು.

ಕರ್ನಾಟಕದಲ್ಲಿ ಅಧಿಕಾರದ ನಿರೀೆ

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿರೀೆ ಇದೆ. ಬಿಜೆಪಿ ಕಾರ್ಯಕರ್ತ ಕೇಂದ್ರೀಕೃತ ಪಕ್ಷ, ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತವೆ. ಕಚ್ಚಾಟ ಅಲ್ಲ. ಮುಂದೆ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.