ಜಿಲ್ಲೆ

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ರಾಜ್ಯಮಟ್ಟದ ಕಲೋತ್ಸವಕ್ಕೆ ನವ್ಯಶ್ರೀ ಆಯ್ಕೆ

ಮಂಡ್ಯ: ನಗರದ ಸಂತ ಜೋಸೆಫ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಬಿ.ಎಂ.ನವ್ಯಶ್ರೀ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಆಯ್ಕೆಯಾಗಿದ್ದಾರೆ.

ನಗರದ ಸಂತ ಜೋಸೆಫ್ ಶಾಲೆಯಲ್ಲಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಬಿ.ಎಂ.ನವ್ಯಶ್ರೀ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷವೂ ಸಹ ರಾಜ್ಯಮಟ್ಕಕ್ಕೆ ಆಯ್ಕೆಯಾಗಿದ್ದ ಬಿ.ಎಂ.ನವ್ಯಶ್ರೀ, ಶಿವಮೊಗ್ಗದಲ್ಲಿ ನಡೆದ ಕಲೋತ್ಸವ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಗಳಿಸಿದ್ದರು. ಈಕೆ ತಾಲೂಕಿನ ಹೊಸಬೂದನೂರು ಗ್ರಾಮದ ಬಿ.ಟಿ.ಮೋಹನ್‌ಕುಮಾರ್ ಮತ್ತು ಎಂ.ಆರ್.ಜ್ಯೋತಿ ಮಗಳು.