ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ಮತ್ತು ಗೋವಾ ರಾಜ್ಯದ ಎನ್ಸಿಸಿಯ 72 ನೌಕಾ ಕೆಡೆಟ್ಗಳು ಅಖಿಲ ಭಾರತ ಸಾಗರ ನೌಕಾಯಾನ ಯಾತ್ರೆಯನ್ನು ಉಡುಪಿಯ ಮಲ್ಪೆಯಿಂದ ಶುಕ್ರವಾರ (ಅ.10) ಆರಂಭಿಸಿದರು.
ಎನ್ಸಿಸಿ ಮಂಗಳೂರು ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್, ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಯುಸಿಎಸ್ಎಲ್)ನ ಸಿಎಫ್ಒ ಶಂಕರ್ ನಟರಾಜ್ ಮತ್ತು ಯುಸಿಎಸ್ಎಲ್ ಡಿಜಿಎಂ ಎಂ.ಅಂಬಲವನನ್ ಉಪಸ್ಥಿತರಿದ್ದರು. ಕ್ಯಾಂಪ್ ಕಮಾಂಡೆಂಟ್ ಕಮಾಂಡರ್ ಅಶ್ವಿನ್ ಎಂ. ರಾವ್ ಎಲ್ಲರನ್ನೂ ಸ್ವಾಗತಿಸಿ ಗೌರವಿಸಿದರು.
ರಾಷ್ಟ್ರೀಯ ಮಟ್ಟದ ಈ ಸಾಹಸ ಯಾತ್ರೆಯಲ್ಲಿ ಕರ್ನಾಟಕ ಮತ್ತು ಗೋವಾದ ಎನ್ಸಿಸಿ ಕೆಡೆಟ್ಗಳು ದೇಶಾದ್ಯಂತ ಇರುವ ಇತರ 16 ಎನ್ಸಿಸಿ ನಿರ್ದೇಶನಾಲಯಗಳ ಕೆಡೆಟ್ಗಳ ವಿರುದ್ಧ ಸ್ಪರ್ಧಿಸಲಿದ್ದಾರೆ. ಕೌಶಲ, ಸಹಿಷ್ಣುತೆ, ಮತ್ತು ತಂಡದ ಕೆಲಸಗಳ ಸಮಗ್ರ ಪರೀಕ್ಷಾರ್ಥವಾಗಿ ನೌಕಾಯಾನ ವಿನ್ಯಾಸಗೊಳಿಸಲಾಗಿದೆ. 27 ಅಡಿ ಉದ್ದದ ಮೂರು ಡಿಕೆ ವೇಲರ್ ಕ್ಲಾಸ್ ದೋಣಿ ಸಜ್ಜುಗೊಳಿಸಲಾಗಿದೆ. ಪ್ರತಿ ದೋಣಿಯಲ್ಲಿ 4 ಹುಡುಗರು, 2 ಹುಡುಗಿಯರು ಇರಲಿದ್ದು, ಒಟ್ಟು ಆರು ತಂಡ ನೌಕಾಯಾನ ನಡೆಸಲಿದೆ. | ಕಮಾಂಡರ್ ಅಶ್ವಿನ್ ಎಂ. ರಾವ್. ಕ್ಯಾಂಪ್ ಕಮಾಂಡೆಂಟ್