ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದಲ್ಲಿ ಶರನ್ನವರಾತ್ರಿ ಮಹೋತ್ಸವ ಕೊನೆಗೊಂಡಿತು. 
ಜಿಲ್ಲೆ

ಕಮಲಶಿಲೆ ಕ್ಷೇತ್ರದಲ್ಲಿ ನವರಾತ್ರಿ ಸಂಪನ್ನ

ಕಮಲಶಿಲೆ: ಇಲ್ಲಿನ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದಲ್ಲಿ ಶರನ್ನವರಾತ್ರಿ ಮಹೋತ್ಸವ ಕೊನೆಗೊಂಡಿತು.

ನವರಾತ್ರಿಯ ಎಲ್ಲ ದಿನದಂದು ವಿಶೇಷ ಪೂಜೆ, ತ್ರಿಕಾಲ ಬಲಿ ಉತ್ಸವ ಮತ್ತು ಮಹೋತ್ಸವ ನಡೆಯಿತು. ನವಮಿಯಂದು ಮಧ್ಯಾಹ್ನ ಚಂಡಿಕಾಯಾಗ,ರಾತ್ರಿ ರಜತ ರಥೋತ್ಸವ, ಪುಷ್ಪಕ ವಾಹನದಲ್ಲಿ ಪುರ ಮೆರವಣಿಗೆ ಶಮೀ ಪೂಜೆ ನೆರವೇರಿದವು. ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನಗೈದರು.

ಸೇವಾಕರ್ತರಿಗೆ ಅನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಅನುವಂಶಿಕ ಜತೆ ಮೊಕ್ತೇಸರ ಆಜ್ರಿ ಚಂದ್ರಶೇಖರ ಶೆಟ್ಟಿ ಪ್ರಸಾದ ನೀಡಿ ಗೌರವಿಸಿದರು. ವ್ಯವಸ್ಥಾಪಕ ಗುರು ಭಟ್, ಅರ್ಚಕ ವೃಂದ, ಸಿಬ್ಬಂದಿ ಸ್ಥಳೀಯರು ಇದ್ದರು.