Navratri Sadagara at Acharya cottage 
ಜಿಲ್ಲೆ

ಆಚಾರ್ಯ ಕುಟೀರದಲ್ಲಿ ನವರಾತ್ರಿ ಸಡಗರ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ಚನ್ನಪ್ಪ ಬಡಾವಣೆಯ ಆಚಾರ್ಯ ಕುಟೀರದಲ್ಲಿ 5ನೇ ವರ್ಷದ ನವರಾತ್ರಿ ಉತ್ಸವಕ್ಕೆ ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್ ಚಾಲನೆ ನೀಡಿದರು.
ಆಚಾರ್ಯ ಶ್ರೀ ವಿಜಯ ಕುಮಾರ ಗುರೂಜಿ ಸಾನ್ನಿಧ್ಯದಲ್ಲಿ ಸಿಂಹಾರೂಢ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು. ನವರಾತ್ರಿ ಆಚರಣೆ ಪ್ರಯುಕ್ತ ತಾಯಿ ಚಾಮುಂಡೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಿದ ಬಳಿಕ ನಾಡದೇವಿ ಮುಂಭಾಗದಲ್ಲಿ ಗಣಹೋಮ, ಕಾಲಬೈರವೇಶ್ವರ ಹಾಗೂ ಪ್ರಧಾನ ದುರ್ಗಾ ಹೋಮ ನೆರವೇರಿಸಲಾಯಿತು.
ವಿವಿಧ ದೇವರಿಗೆ ಪೂಜೆ:
ನವರಾತ್ರಿ ಆಚರಣೆ ಪ್ರಯುಕ್ತ ಕುಟೀರದಲ್ಲಿ ಶಕ್ತಿಯ ಅದಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಜತೆಗೆ ಗೌರಿ, ಲಕ್ಷ್ಮೀ, ಸರಸ್ವತಿ, ದುರ್ಗಾದೇವಿ ಸೇರಿ ಗಣೇಶ, ಕಾಲಬೈರವೇಶ್ವರ, ಆಂಜನೇಯ, ಶ್ರೀದೇವಿ, ಭೂದೇವಿ ಸಮೇತ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವರುಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು.
ದೇಗುಲಗಳಲ್ಲಿ ನವರಾತ್ರಿ ಆರಂಭ: ಪೇಟೆಯಲ್ಲಿನ ರಾಜರಾಜೇಶ್ವರಿ ಹಾಗೂ ಕನ್ನಕಾ ಪರಮೇಶ್ವರ ದೇಗುಲಗಳಲ್ಲಿ ನವರಾತ್ರಿ ಆಚರಣೆಗೆ ಚಾಲನೆ ದೊರೆತಿದ್ದು, ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜಾದಿ ನೆರವೇರಿಸಲಾಯಿತು.
ಮಂಡ್ಯ ತಾಪಂ ಇಒ ಮೋಹನ್‌ಕುಮಾರ್, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ನವರಾತ್ರಿ ಆಚರಣಾ ಸಮಿತಿ ಅಧ್ಯಕ್ಷ ಎಂ.ಎನ್.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸೊಂಡೇಕೊಪ್ಪ ರಮೇಶ್, ಸಹ ಕಾರ್ಯದರ್ಶಿ ವೃಕ್ಷ ಮಹೇಶ್, ಸದಸ್ಯ ಕೆ.ಸಿ.ಕುಮಾರ್, ರವಿಕುಮಾರ್, ಚಂದ್ರಕುಮಾರ್, ಪ್ರಮೋದ್‌ಕುಮಾರ್, ಉದ್ಯಮಿ ಮಂಜುನಾಥ್, ಎಂ.ಎನ್.ಮೋಹನ್ ಪುರೋಹಿತ ಸುದರ್ಶನ್, ಶ್ರೀನಾಥ್, ಕಿತ್ತನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಮುಖಂಡ ರವಿಕುಮಾರ್, ಮಂಜುಳಾ ಮಹೇಶ್, ಪ್ರೇಮಾ ರವಿಕುಮಾರ್, ಚಂದ್ರಿಕಾ ಮತ್ತಿತರರು ಇದ್ದರು.