ಲೋಕಾಪುರ ವೆಂಕಟೇಶ್ವರ ದೇವಸ್ಥಾನದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಭಕ್ತರು ಅನಾವರಣಗೊಳಿಸಿದರು. ಅರ್ಚಕ ಬಿ.ಎಲ್.ಬಬಲಾದಿ, ವಸಂತರಾವ್ ಕುಲಕರ್ಣಿ, ಬಿ.ಡಿ.ಚಿನಗುಂಡಿ, ಗುರುರಾಜ ಜೋಶಿ ಇತರರು ಇದ್ದರು. 
ಜಿಲ್ಲೆ

ನವರಾತ್ರಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಲೋಕಾಪುರ: ಪಟ್ಟಣದ ವೆಂಕಟೇಶ್ವರ ನವರಾತ್ರಿ ಉತ್ಸವ ಪ್ರಯುಕ್ತ ಅ.3 ರಿಂದ 12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ಗುರುರಾಜ ಜೋಶಿ ಹೇಳಿದರು.

ಪಟ್ಟಣದ ದೇವಸ್ಥಾನ ಆವರಣದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಬಿಡುಗಡೆ ಮಾಡಿ ಮಾತನಾಡಿದ ಅವರು, ಅ. 3 ರಂದು ಧರ್ಮ ಧ್ವಜಾರೋಹಣ, ಘಟಸ್ಥಾಪನೆ, ಅ. 7ರಂದು ಗರುಡ ಪಂಚಮಿ, ಸಾಂಪ್ರದಾಯಿಕ ಪೂಜೆ, ಅ. 11 ರಂದು ದುರ್ಗಾಷ್ಟಮಿ ಹಾಗೂ ಆಯುಧ ಪೂಜೆ, 12ರಂದು ಶನಿವಾರ ವಿಜಯದಶಮಿ ದಿನ ರಥೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು.

ಪ್ರತಿ ದಿವಸ ಸಂಜೆ ವೆಂಕಟೇಶ್ವರ ಮಹಾತ್ಮೆ ಪುರಾಣ ನಡೆಯಲಿದೆ. ಸವ್ ಸೇವಾ ಸ್ವಸ್ತಿವಾಚನ ಮತ್ತು ತಾರತಮ್ಯ ಭಜನೆ ಸಂಗೀತ ಕಾರ್ಯಕ್ರಮ ಜರುಗುವುದು ಎಂದು ಅರ್ಚಕ ಬಿ.ಎಲ್.ಬಬಲಾದಿ ತಿಳಿಸಿದರು.

ಆಮಂತ್ರಣ ಪತ್ರಿಕೆ ಬಿಡುಗಡೆ ವೇಳೆ ನಿವೃತ್ತ ಶಿಕ್ಷಕ ವಸಂತರಾವ್ ಕುಲಕರ್ಣಿ, ಬಿ.ಡಿ.ಚಿನಗುಂಡಿ, ಕಷ್ಣಾಜಿ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ಹಣಮಂತ ಹುಕುಮನವರ, ಭೀಮಣ್ಣ ಜೋಶಿ, ಸುಶೀಲೇಂದ್ರ ದೇಶಪಾಂಡೆ ಇತರರಿದ್ದರು.