ಜಿಲ್ಲೆ

ರಾಮಕೃಷ್ಣ ಆಶ್ರಮದಲ್ಲಿ ನವರಾತ್ರಿ ಆಚರಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನವರಾತ್ರಿ ಅಂಗವಾಗಿ ಅ. 3ರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅ. 12ರವರೆಗೆ ಜರುಗಲಿವೆ.
ನಿತ್ಯ ಬೆಳಗ್ಗೆ 10.30ರಿಂದ ಶ್ರೀದೇವಿ ಸ್ತುತಿ, ಭಜನೆ, ಮಹಾಮಂಗಳಾರತಿ, ಸಂಜೆ 6 ಗಂಟೆಯಿಂದ ಲಲಿತಾ ಸಹಸ್ರನಾಮ ಪಾರಾಯಣ, 7.20ಕ್ಕೆ ದುರ್ಗಾ ದೇವಿಗೆ ಆರತಿ ನಡೆಯಲಿದೆ. ಅ. 10ರಂದು ಸಂಜೆ 7.30ಕ್ಕೆ ಬೆಂಗಳೂರಿನ ಎಂ.ಆರ್​. ಶ್ರೀನಿವಾಸ ಹಾಗೂ ತಂಡದಿಂದ ಸೂತ್ರದ ಗೊಂಬೆಯಾಟ ಏರ್ಪಡಿಸಲಾಗಿದೆ.
ಅ. 6ರಂದು ಸಂಜೆ 7.30ಕ್ಕೆ ನಿಶಾದ್​ ಹಾಗೂ ನವಶಾದ್​ ಸಹೋದರರಿಂದ ಹಿಂದುಸ್ತಾನಿ ಸಂಗೀತ ಜುಗಲಬಂದಿ, ಅ. 10ರಂದು ದುರ್ಗಾಷ್ಟಮಿ ಪ್ರಯುಕ್ತ ಬೆಳಗ್ಗೆ 10.30ರಿಂದ ಶ್ರೀ ದುರ್ಗಾ ಹೋಮ, ಸಂಜೆ 7.30ಕ್ಕೆ ಉಪನ್ಯಾಸಕ ರವಿ ಆಚಾರ್​ ಅವರು ಭಗವತ್​ ಚಿಂತನೆ ಹಾಗೂ ಅನುಷ್ಠಾನ ಕುರಿತು ಉಪನ್ಯಾಸ ನೀಡುವರು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.