ಜಿಲ್ಲೆ

ಉಳುವೆ ಆದಿಶಕ್ತಿ ದೇವಳದಲ್ಲಿ ನವರಾತ್ರಿ ಸಂಪನ್ನ

ಮೂಡುಬಿದಿರೆ: ಕಡಂದಲೆ ಉಳುವೆಯ ಶ್ರೀ ಆದಿಶಕ್ತಿ ದೇವಿ ಸನ್ನಿಧಿಯಲ್ಲಿ ನಡೆದ ನವರಾತ್ರಿ ಉತ್ಸವ ವೇದಮೂರ್ತಿ ಕೆ.ಎನ್.ರಾಘವೇಂದ್ರ ಭಟ್ ಸಾರಥ್ಯದಲ್ಲಿ ಸಂಪನ್ನಗೊಂಡಿತು.

ಹತ್ತು ದಿನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲಾ ರೀತಿಯಿಂದ ಸಹಕರಿಸಿದ ಎಲ್ಲರಿಗೂ ದೇವಸ್ಥಾನದ ಮುಖ್ಯಸ್ಥ ಸುಂದರ ಗೌಡ ಉಳುವೆ ಕೃತಜ್ಞತೆ ಸಲ್ಲಿಸಿದರು.

ನವರಾತ್ರಿ ಪ್ರಯುಕ್ತ ಎಲ್ಲಾ ದಿನ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಭಜನಾ ಕಾರ್ಯಕ್ರಮ ನಡೆದವು. ವಿಶೇಷವಾಗಿ ರಂಗ ಪೂಜೆ,ನಿತ್ಯಪೂಜೆ, ಗಣಪತಿ ಹೋಮ, ಚಂಡಿಕಾಯಾಗ, ಪೂರ್ಣಾಹುತಿ, ಮಹಾಪೂಜೆ, ಆಯುಧಪೂಜೆ, ವಾಹನ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.