ಕುಕನೂರು ಜವಾಹರ್​ ನವೋದಯ ವಿದ್ಯಾಲಯದಲ್ಲಿ ಆಡಳಿತ ವೈಲ್ಯದಿಂದ ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಕ್ರಮ ಕೈಗೊಳ್ಳುವಂತೆ ಪಾಲಕರು ಸೋಮವಾರ ಸಂಸದ ರಾಜಶೇಖರ ಹಿಟ್ನಾಳಗೆ ಮನವಿ ಸಲ್ಲಿಸಿದರು. ಪಾಲಕರಾದ ಕುಬೇರ ಮಜ್ಜಿಗಿ, ಶಿವಾನಂದ ಪ್ಯಾಟಿ, ಬಸವರಾಜ ಹುಬ್ಬಳ್ಳಿ, ಜಗನ್ನಾಥ ಬಿಸರಳ್ಳಿ, ಹನುಮಂತಪ್ಪ ಹಳ್ಳಿ, ಯಲ್ಲಪ್ಪ ರಕ್ಕಸಗಿ ಇದ್ದರು. 
ಜಿಲ್ಲೆ

ನವೋದಯ ವಿದ್ಯಾಲಯ ಅದ್ವಾನ ಸರಿಪಡಿಸಿ

ಕೊಪ್ಪಳ: ಕುಕನೂರು ಜವಾಹರ್​ ನವೋದಯ ವಿದ್ಯಾಲಯದಲ್ಲಿ ಆಡಳಿತ ವೈಲ್ಯದಿಂದ ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಕ್ರಮ ಕೈಗೊಳ್ಳುವಂತೆ ಪಾಲಕರು ಸೋಮವಾರ ಸಂಸದ ರಾಜಶೇಖರ ಹಿಟ್ನಾಳಗೆ ಮನವಿ ಸಲ್ಲಿಸಿದರು.

ಆ.20ರಂದು ಪಿಯು ವಿದ್ಯಾರ್ಥಿಗಳು ಪ್ರೌಢ ಶಾಲೆ ವಿದ್ಯಾರ್ಥಿಗಳ ಮೇಲೆ ಹಗಲಿನಲ್ಲೇ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆ, ಬೆಲ್ಟ್​ ಹಾಗೂ ಪೈಪ್​ ಮೂಲಕ ಬಡಿದಾಡಿದ್ದಾರೆ. 50 ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗಿದೆ. ಭಯದಲ್ಲಿ ಮಕ್ಕಳಿದ್ದಾರೆ. ಇಷ್ಟೆಲ್ಲ ನಡೆದರೂ ಆಡಳಿತ ಮಂಡಳಿ, ಪ್ರಾಚಾಯೆರ್, ಶಿಕ್ಷಕರು ಪಾಲಕರ ಗಮನಕ್ಕೆ ತಂದಿಲ್ಲ. ಇದು ಹೊಸ ಟನೆ ಅಲ್ಲ. ಆಗಾಗ ಇಂಥ ಟನೆಗಳಾಗುತ್ತಿವೆ. ಆದರೂ ಆಡಳಿತ ಎಚ್ಚೆತ್ತುಕೊಳ್ಳುತ್ತಿಲ್ಲವೆಂದು ಆರೋಪಿಸಿದರು.

ಆಡಳಿತ ಮಂಡಳಿ ವೈಲ್ಯದಿಂದ ಟನೆಗಳಾಗುತ್ತಿವೆ. ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆಂಬ ಮಾಹಿತಿ ಇದೆ. ಪ್ರಾಚಾರ್ಯರನ್ನು ಅಮಾನತು ಮಾಡಬೇಕು. ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರ ಹಾಕಬೇಕು. ಭದ್ರತಾ ಸಿಬ್ಬಂದಿ ಅಮಾನತುಗೊಳಿಸಿ. ವಸತಿ ಗೃಹಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ. ಪೊಲೀಸ್​ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ಪಾಲಕರು ವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತೇವೆಂದು ಎಚ್ಚರಿಸಿದರು.

ಪಾಲಕರಾದ ಕುಬೇರ ಮಜ್ಜಿಗಿ, ಶಿವಾನಂದ ಪ್ಯಾಟಿ, ಬಸವರಾಜ ಹುಬ್ಬಳ್ಳಿ, ಜಗನ್ನಾಥ ಬಿಸರಳ್ಳಿ, ಹನುಮಂತಪ್ಪ ಹಳ್ಳಿ, ಯಲ್ಲಪ್ಪ ರಕ್ಕಸಗಿ, ಟಿ.ಎನ್​.ಚವ್ಹಾಣ್​. ಗಂಗಾಧರ ಡೊಳ್ಳಿನ, ರಂಗನಾಥ ಮೇಟಿ, ನಾಗರಾಜ ಹೊನಗಡ್ಡ, ದ್ಯಾಮಣ್ಣ ವಡ್ರಕಲ್​, ಮಲ್ಲಪ್ಪ ಇತರರಿದ್ದರು.