ಜಿಲ್ಲೆ

ನವೋದಯ ಟ್ರಸ್ಟ್ ವಿಮೆ ಚೆಕ್ ವಿತರಣೆ

Mangaluru - Prakash MC Manjeshwar

ಮಂಗಳೂರು: ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್( ರಿ) ಪ್ರಾಯೋಜಿತ ನವೋದಯ ಸ್ವಸಹಾಯ ಸಂಘದ ಸದಸ್ಯ ಇತ್ತೀಚೆಗೆ ಆಕಸ್ಮಿಕ ಮರಣ ಹೊಂದಿದ್ದು, ಈ ಕುಟುಂಬದ ವಾರಿಸುದಾರರಿಗೆ ವಿಮೆ ಚೆಕ್ ಅನ್ನು  ಸೋಮವಾರ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ವಿತರಣೆ ಮಾಡಿದರು.

ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿರುವ  ಇಂಚರ  ನವೋದಯ ಸ್ವಸಹಾಯ ಸಂಘದ ಸದಸ್ಯ ಸಂತೋಷ್ ಕುಮಾರ್ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಮೃತ ಸಂತೋಷ್ ಕುಮಾರ್ ಅವರ ತಾಯಿ ಜಯಂತಿ ಅವರಿಗೆ ವಿಮಾ ಯೋಜನೆಯ  ಒಂದು ಲಕ್ಷ ರೂ  ಚೆಕ್ ಅನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ವಿತರಿಸಿದರು.

 
ಎಸ್ ಸಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ಟ್ರಸ್ಟಿ ಸುನಿಲ್ ಕುಮಾರ್ ಬಜಗೋಳಿ, ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಉಪಸ್ಥಿತರಿದ್ದರು.