ಗೊಳಸಂಗಿ ಸಮೀಪದ ಹುಣಶಾಳ-ಪಿಸಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಶನಿವಾರ ತಡರಾತ್ರಿ ನಡೆದ ಕೃಷ್ಣಾ ತೀರದ ಕನ್ನಡಿಗರ ಸಮಾವೇಶ, ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಿಮ್ಮಲಗಿ ಅರಳೆಲೆ ಕಟ್ಟಿಮನಿ ಸಿದ್ಧರೇಣುಕ ಶಿವಾಚಾರ್ಯರು ಚಾಲನೆ ನೀಡಿದರು. ಕರವೇ ಸಂಚಾಲಕ ಶ್ರೀಶೈಲ ಮುಳಜಿ, ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ, ತಾಲೂಕಾಧ್ಯಕ್ಷ ಆನಂದ ಹಡಲಗಿ ಇದ್ದರು. 
ಜಿಲ್ಲೆ

ನಾಡ ಸಂಸ್ಕೃತಿ ಮರೆಯುತ್ತಿರುವ ನವನಾರಿಯರು

ಗೊಳಸಂಗಿ: ಆದಿಕಾಲದ ಕನ್ನಡ ನಾಡಿನ ಗರತಿಯರು ಹಾಡುತ್ತಿದ್ದ ಬೀಸುಕಲ್ಲಿನ ಪದ, ಜೋಗುಳ ಪದ, ಸೋಬಾನೆ ಪದ ಮತ್ತು ಕೃಷಿಕರ ಲಾವಣಿ ಪದ, ಸುಗ್ಗಿ ಕುಣಿತದ ಪದಗಳಿಂದು ಕಣ್ಮರೆಯಾಗಿ ಕರುನಾಡಿನ ಸಂಸ್ಕೃತಿ ಕ್ರಮೇಣ ಕಡೆಗಣನೆಯಾಗುತ್ತಿರುವುದು ವಿಪರ್ಯಾಸ ಎಂದು ಶಿಕ್ಷಕ ಅಶೋಕ ಹಂಚಲಿ ಬೇಸರಿಸಿದರು.

ಸಮೀಪದ ಹುಣಶಾಳ-ಪಿಸಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಆಯೋಜಿಸಿದ್ದ ಕೃಷ್ಣಾ ತೀರದ ಕನ್ನಡಿಗರ ಸಮಾವೇಶ, ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರವೇ ನಿಡಗುಂದಿ ತಾಲೂಕು ಅಧ್ಯಕ್ಷ ಆನಂದ ಹಡಗಲಿ ಮಾತನಾಡಿ, ಗಡಿ, ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ಯಾರೊಂದಿಗೂ ರಾಜಿಯಾಗದೇ ಪ್ರಾಮಾಣಿಕ ಹೋರಾಟ ಮಾಡುವುದು ನಮ್ಮ ಧ್ಯೇಯವಾಗಿದೆ ಎಂದರು.

ಚಿಮ್ಮಲಗಿ ಅರಳೆಲೆ ಕಟ್ಟಿಮನಿ ಸಿದ್ಧರೇಣುಕ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ, ಶಿಕ್ಷಕರಾದ ಮಹೇಶ ಗಾಳಪ್ಪಗೋಳ, ಮಲ್ಲಿಕಾರ್ಜುನ ವಾಲಿ, ಸಿದ್ದಯ್ಯ ಚಿಕ್ಕಮಠ ಮಾತನಾಡಿದರು. ಕರವೇ ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು.

ವಂದಾಲ ಗ್ರಾಪಂ ಅಧ್ಯಕ್ಷ ವೀರೇಶ ಗಣಾಚಾರಿ, ತಾಪಂ ಮಾಜಿ ಅಧ್ಯಕ್ಷ ಬಂದೇನವಾಜ ಡೋಲಚಿ, ಕರವೇ ಜಿಲ್ಲಾ ಉಪಾಧ್ಯಕ್ಷ ಸತೀಶ ನರಸರೆಡ್ಡಿ, ಕಾಶೀರಾಯ ದೇಸಾಯಿ, ಮಲ್ಲನಗೌಡ ಪಾಟೀಲ, ಬಸವರಾಜ ಹಡಗಲಿ, ಸಂಗಮೇಶ ತೋಟದ ಮತ್ತಿತರರಿದ್ದರು.

ಸಾಧಕರ ಸನ್ಮಾನ: ಕೇವಲ 2ವರ್ಷದಿಂದ 75 ವಯಸ್ಸಿನವರೆಗೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸೃಷ್ಟಿ ದಾಸರ, ದಿತಿ ಶಿರಶ್ಯಾಡ, ಗುರುಬಸಪ್ಪ ಯಂಕಂಚಿ, ಬಸವರಾಜ ಚಲ್ಮಿ, ಆಕಾಶ ಹಳೆರೊಳ್ಳಿ, ಸಿದ್ರಾಮೇಶ ಅರಮನಿ, ಅಶೋಕ ಹಂಚಲಿ, ಬಿ.ಟಿ. ಗೌಡರ, ಶಬ್ಬೀರ ನದಾಫ್, ಸಾಹೇಬಲಾಲ ಚಪ್ಪರಬಂದ, ಸಂಜೀವ ಹಜೇರಿ ಮತ್ತಿತರರಿಗೆ ಸನ್ಮಾನಿಸಿ ಕನ್ನಡ ಶಿಖಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.