ನವಿಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿ ಸಾಮಾನ್ಯ ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಜು, ಸಿಬ್ಬಂದಿ ಚಂದ್ರು ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕುಳ್ಳಯ್ಯ , ಶಿವರಾಜ್, ಸತೀಶ್ ಇತರರು ಇದ್ದರು. 
ಜಿಲ್ಲೆ

ನವಿಲೂರು ಡೇರಿಗೆ 16 ಲಕ್ಷ ರೂ. ನಿವ್ವಳ ಲಾಭ

ಬೈಲುಕುಪ್ಪೆ: ನವಿಲೂರು ಹಾಲು ಉತ್ಪಾದಕರ ಸಹಕಾರ ಸಂಘವು 16 ಲಕ್ಷ 87 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ನವಿಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಹೈನುಗಾರಿಕೆಯು ಆರ್ಥಿಕ ಸದೃಢತೆಗೆ ಸಹಕಾರಿಯಾಗಿದೆ. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದು ಸಲಹೆ ನೀಡಿದರು.

ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಜು, ಸಿಬ್ಬಂದಿ ಚಂದ್ರು ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಕುಳ್ಳಯ್ಯ, ಉಪಾಧ್ಯಕ್ಷ ಶಿವರಾಜ್, ನಿರ್ದೇಶಕರಾದ ರಾಜು, ಶಿವರಾಜ್, ಜವರಯ್ಯ, ಚಂದ್ರಪ್ಪ, ಕುಂಟಯ್ಯ, ಅರುಣ್ ಕುಮಾರ್, ರೇವಣ್ಣ ರಾಜಾಮಣಿ, ಕಮಲಮ್ಮ, ಸಿಬ್ಬಂದಿ ಚಂದ್ರು, ಹರೀಶ್ ಕುಮಾರ್, ಮುಖಂಡರಾದ ಸ್ವಾಮೇಗೌಡ, ಗಣೇಶ್, ಲಕ್ಷ್ಮೇಗೌಡ, ದೊಡ್ಡಯ್ಯ, ನಾರಾಯಣಯ್ಯ, ರಾಜು, ಶಿವಪ್ಪ, ಮುತ್ತಣ್ಣ, ಚೆಲುವಯ್ಯ, ನಿಂಗರಾಜಗೌಡ ಇತರರು ಇದ್ದರು.