ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸತ್ತೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಬುಧವಾರ ಭಕ್ತಿ ಭಾವದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಶಿವಲಿಂಗ ಪೂಜೆಯ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊ0ಡವು.
ವಿದ್ಯಾರ್ಥಿಗಳು ಪ್ರಸ್ತುತಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಮಕ್ಕಳು ಶಿವತಾಂಡವ ನೃತ್ಯವನ್ನು ಪ್ರದರ್ಶಿಸಿದರು. ನಂತರ ಲಿಂಗಾಷ್ಟಕ ಪಠಣ ಮತ್ತು ಶಿವನ ಮಹಿಮೆ ಕುರಿತು ವಿದ್ಯಾರ್ಥಿಗಳು ಭಾಷಣ ಮಾಡಿದರು. ಶಿವನ ಶಕ್ತಿಯ ಮಹತ್ವ ಹಾಗೂ ಶಿವರಾತ್ರಿ ಹಬ್ಬದ ವಿಶೇಷತೆಯನ್ನು ವಿವರಿಸಿದರು.
ಶಾಲೆಯ ಕರೆಸ್ಪಾಂಡೆ0ಟ್ ಗುರುರಾಜ್ ಅಗಡಿ, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈವಿಕ್ ನಿರೂಪಿಸಿದರು. ಮಯೂರ್ ವಂದಿಸಿದರು.