ಹುಬ್ಬಳ್ಳಿ: ಇಲ್ಲಿಯ ನವಶ್ರೀ ಕಲಾ ಚೇತನ ಸಂಸ್ಥೆ ಹಾಗೂ ಧಾರವಾಡದ ಜಾನಪದ ಸಂಶೋಧನ ಕೇಂದ್ರದ ಸಂಯುಕ್ರಾಶ್ರಯದಲ್ಲಿ ಸೆ. 10ರಂದು ಬೆಳಗ್ಗೆ 10ಕ್ಕೆ ಅಶೋಕನಗರದ ಡಾ. ಡಿ.ಎಸ್. ಕಕಿರ್ ಕನ್ನಡ ಭವನದಲ್ಲಿ ಜಾನಪದ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯೆ ಸಂಗೀತಾ ದೇವದಾಸ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಾವಂತ ಮಂಗಳಮುಖಿಯರಿಗೆ ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳು ಮಹಿಳೆಯರು ಮತ್ತು ಪುರುಷರಿಗಾಗಿ ಜಾನಪದ ನೃತ್ಯ, ಹಬ್ಬದ ಹಾಡುಗಳ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಕನಿಷ್ಠ ನಾಲ್ಕು ಜನರಿರುವ ಜಾನಪದ ನೃತ್ಯ ತಂಡಗಳು ಭಾಗವಹಿಸಬಹುದು. ಹಬ್ಬದ ಹಾಡುಗಳು ಮೂಲ ಜಾನಪದದಲ್ಲಿರಬೇಕು. ಎಲ್ಲ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. ಮಹಿಳೆಯರಿಗೆ ಒಗಟು ಹೇಳುವ ಸ್ಪರ್ಧೆ ನಡೆಯಲಿದೆ. ಭಾರತೀಯ ಸಂಸತಿ ಉಳಿಸಿ ಬೆಳೆಸುವ ದಿಸೆಯಲ್ಲಿ ಈ ಕಾರ್ಯಕ್ರಮ ನೆರವಾಗಲಿದೆ ಎಂದರು.
ಸಂಟಕರಾದ ಬಸೀರ್ ಅಹ್ಮದ ಸವಣೂರ, ಶಕುಂತಲಾ ರೇಶ್ಮಿ, ರೇಖಾ ಇದ್ದರು.