ಹುಬ್ಬಳ್ಳಿ: ನಗರದ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ವೈಭವ ಕಳೆಗಟ್ಟಿದೆ. ಭಾನುವಾರದಿಂದ ಆರಂಭವಾದ ಉತ್ಸವದಲ್ಲಿ ಜನರು ಭಕ್ತಿ ಭಾವದಿಂದ ಪಾಲ್ಗೊಂಡು ದೇವಿ ಆರಾಧನೆ ಮಾಡಿದರು.
ಒಂಬತ್ತು ದಿನ ದೇವಿ ಪೂಜೆ, ಆರಾಧನೆ ಮಾಡಲು ಅನೇಕ ಭಕ್ತರು ತಮ್ಮ ಮನೆಗಳಲ್ಲಿ ಟಸ್ಥಾಪನೆ ಮಾಡಿದರು. ಹಲವು ದೇವಸ್ಥಾನಗಳಲ್ಲಿ ದೇವಿ ಮೂತಿರ್ ಪ್ರತಿಷ್ಠಾಪನೆ ಮಾಡಲಾಗಿದ್ದು, ಸಾರ್ವಜನಿಕವಾಗಿ ಉತ್ಸವ ನಡೆಸುತ್ತಿದ್ದಾರೆ.
ಶರನ್ನವರಾತ್ರಿ ಉತ್ಸವ: ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಶರನ್ನವರಾತ್ರಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ದೇವಿ ಮೂತಿರ್ಯನ್ನು ಶೋಭಾಯಾತ್ರೆಯಲ್ಲಿ ತಂದು ಪ್ರತಿಷ್ಠಾಪನೆ ಮಾಡಲಾಯಿತು.
ಭಾನುವಾರ ರುದ್ರಾಭಿಷೇಕ, ಶ್ರೀದುರ್ಗಾ ಪ್ರತಿಷ್ಠಾಪನೆ, ಗಣಹೋಮ, ನವಗ್ರಹ ಹೋಮ, ಶ್ರೀ ದುರ್ಗಾ ಹೋಮ, ಶ್ರೀ ದುರ್ಗಾ ಸಪ್ತಶತಿ ಪಾರಾಯಣ ನಡೆಯಿತು.
ದುರ್ಗಾದೇವಿ: ಇಲ್ಲಿಯ ದಾಜಿಬಾನಪೇಟ ಎಸ್.ಎಸ್.ಕೆ. ಪಂಚ ಟ್ರಸ್ಟ್ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಪುರಾತನ ಮಂದಿರ ಹಾಗೂ ಗ್ರಾಮದೇವತೆಯಂದು ಪ್ರಸಿದ್ಧಿ ಪಡೆದಿರುವ ಶ್ರೀ ದ್ಯಾಮವ್ವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಟಸ್ಥಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾತೆಯರಿಗೆ ಬೆಳ್ಳಿ ಆಭರಣ, ರೇಷ್ಮೆ ಸೀರೆಗಳ ಶೃಂಗಾರದೊಂದಿಗೆ ಹಣ್ಣು ಹಂಪಲುಗಳ ನೈವೇದ್ಯ ಅಪಿರ್ಸಲಾಯಿತು.
ಇಲ್ಲಿಯ ದೇಶಪಾಂಡೆ ನಗರ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ನವರಾತ್ರಿಯ ಮೊದಲ ದಿನ ಶ್ರೀ ಕಾಮಾಕ್ಷಿ ದೇವಿ ಅಲಂಕಾರ ಮಾಡಲಾಗಿತ್ತು.
ದಾಜಿಬಾನಪೇಟ ಸೀತಾಬಾಯಿ ಕಲ್ಯಾಣ ಮಂಟಪದಲ್ಲಿ ದಸರಾ ಮಹೋತ್ಸವ ಸಮಿತಿ ವತಿಯಿಂದ ಟಸ್ಥಾಪನೆ ಮಾಡಿ, ಮಹಿಳೆಯರು ವಿಶೇಷ ಪೂಜೆ ನೆರವೇರಿಸಿದರು. ತುಳಜಾಭವಾನಿ ದೇವಸ್ಥಾನದಲ್ಲಿ ಟಸ್ಥಾಪನೆ ಮಾಡಿ ಸಡಗರದಿಂದ ದೇವಿ ಆರಾಧನೆ ಮಾಡಲಾಯಿತು.