ಜಿಲ್ಲೆ

ನವರಾತ್ರಿ ವೈಭವ : ಎಲ್ಲೆಡೆ ಭಕ್ತಿಯಿಂದ ಶಕ್ತಿದೇವತೆಯ ಆರಾಧನೆ ದೇವಿ ಪೂಜೆ

ದಸರಾ ಹಬ್ಬದ ನವರಾತ್ರಿ ಕಾಲಕ್ಕೆ ದೇವಿಗೆ ಒಂದೊಂದು ಒಂದು ಅಲಂಕಾರ ಮಾಡಲಾಗುತ್ತಿದೆ. ಶಕ್ತಿದೇವತೆಗಳ ದೇವಾಲಯಗಳಿಗೆ ಭಕ್ತರು ಆಗಮಿಸುತ್ತಿದ್ದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇಧ್ಯ ಸಮರ್ಪಿಸಿದರು

ವಿಜಯವಾಣಿ ಸುದ್ದಿಜಾಲ ಕಲಬುರಗಿ

ನವರಾತ್ರಿ ಹಬ್ಬದ ಸಂಭ್ರಮ ಎಲ್ಲಡೆ ಕಳೆಗಟ್ಟಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ದಸರಾ ಮತ್ತು ನಾಡ ಹಬ್ಬದ ವೈಭವ ಜೋರಾಗಿದೆ. ಶಕ್ತಿ ದೇವತೆಯಾಗಿರುವ ದೇವಿಯ ಆರಾಧನೆ ಶ್ರದ್ಧಾಭಕ್ತಿಯಿಂದ ಭಕ್ತರು ಮಾಡುತ್ತಿದ್ದಾರೆ.
ದಸರಾ ಹಬ್ಬದ ನವರಾತ್ರಿ ಕಾಲಕ್ಕೆ ದೇವಿಗೆ ಒಂದೊಂದು ಒಂದು ಅಲಂಕಾರ ಮಾಡಲಾಗುತ್ತಿದೆ. ಶಕ್ತಿದೇವತೆಗಳ ದೇವಾಲಯಗಳಿಗೆ ಭಕ್ತರು ಆಗಮಿಸುತ್ತಿದ್ದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇಧ್ಯ ಸಮರ್ಪಿಸಿದರು. ನಗರದ ಶಹಾಬಜಾರ ಭವಾನಿ ಮಂದಿರ, ಅಪ್ಪನ ಕೆರೆ ಸಮೀಪದ ಯಲ್ಲಮ್ಮ ಗುಡಿ, ಲಾಲಗೇರಿ ಸಮೀಪದ ಭವಾನಿ ದೇವಾಲಯ, ಜೇವರ್ಗಿ ರಸ್ತೆಯ ಸಿಂದಗಿ ಅಂಬಾ ಭವಾನಿ ಗುಡಿ, ಬ್ರಹ್ಮಪುರದ ಅಂಭಾಭವಾನಿ  ಮೊದಲಾದ ದೇವಾಲಯಗಳಲ್ಲಿ ನವರಾತ್ರಿಯ ಅಂಗವಾಗಿ ದೇವಿಗೆ ವಿಶೇಷವಾದ ಅಲಂಕಾರ ಮಾಡಲಾಗಿದೆ. ದೇವಾಲಯಗಳಿಗೆ ವಿದ್ಯುತ್ ದೀಪ ಅಲಂಕಾರ ಮಾಡಿದ್ದು ಗಮನ ಸೆಳೆಯುತ್ತಿದೆ.