ಕುಶಾಲನಗರ:
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಜಯನಗರ ಗ್ರಾಮದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ 13ನೇ ವರ್ಷದ ನವರಾತ್ರಿ ದಸರಾ ಉತ್ಸವ ಶ್ರಧ್ಧಾಭಕ್ತಿಯಿಂದ ವಿವಿಧ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳ ಮೂಲಕ ಗುರುವಾರ ನಡೆಯಿತು.
ನವರಾತ್ರಿ ಪೂಜೋತ್ಸವ ಅಂಗವಾಗಿ ಕಾವೇರಿ ನದಿಯಿಂದ ಗಂಗಾ ಕಳಸ ತಂದು, ದೇವಿಗೆ ಅಭಿಷೇಕ, ಅಲಂಕಾರ, ದಶದ್ರವ್ಯ ದುರ್ಗಾ ಹೋಮ, ಗಣಪತಿ ಹೋಮ ನಡೆದು ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ನಂತರ ಅನ್ನಸಂರ್ತಪಣೆ ಕಾರ್ಯ ನಡೆಯಿತು.
ನಂತರ ವಿದ್ಯುತ್ ಅಲಂಕೃತವಾದ ಮತ್ತು ವಿವಿಧ ಬಗೆಯ ಹೂವಿನ ಅಲಂಕಾರದಿAದ ಕೂಡಿದ ಭವ್ಯ ಮಂಟಪದಲ್ಲಿ ದೇವಿ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಪೂಜಾ ಕೈಂಕರ್ಯಗಳನ್ನು ದೇವಾಲಯದ ಅರ್ಚಕ ಸುನಿಲ್ ಭಟ್ ನೆರವೇರಿಸಿದರು. ಪೂಜ್ಯೋತ್ಸವ ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಭಕ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಣ್ಣೇಗೌಡ, ಕಾರ್ಯದರ್ಶಿ, ಸಮಿತಿಯ ನಿರ್ದೇಶಕರು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.