ಜಿಲ್ಲೆ

ಹುಬ್ಬಳ್ಳಿಯ ವಿವಿಧೆಡೆ ಸಂಭ್ರಮದ 78ನೇ ಸ್ವಾತಂತ್ರ್ಯೋತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಉತ್ಸಾಹ, ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಅವರು ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಯೋಧರ ತ್ಯಾಗ, ಬಲಿದಾನಗಳನ್ನು ಸ್ಮರಿಸಿದರು. ಭಾರತೀಯರೆಲ್ಲರೂ ಒಗ್ಗಟ್ಟಾಗಿ ದೇಶದ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕೆಂದು ಹೇಳಿದರು.

ಡಾ. ಜಯಶ್ರೀ ಕುಂದಗೋಳಮಠ, ನಶಾಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಶಿಣಾರ್ಥಿಗಳು ಸಂಗೀತ ಹಾಗೂ ನತ್ಯಗಳ ಮೂಲಕ ದೇಶಾಭಿಮಾನ ವ್ಯಕ್ತಪಡಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಗೋಕುಲದಲ್ಲಿ: ತಾಲೂಕಿನ ಗೋಕುಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಬಸಪ್ಪ ಎಲಿಗಾರ ನೆರವೇರಿಸಿದರು.

ಅತಿಥಿಗಳಾಗಿ ಹನುಮಂತ ಉಣಕಲ್, ಮಹಾದೇವಪ್ಪ ಪೂಜಾರ, ಸಂಘದ ನಿರ್ದೇಶಕರು, ರೈತರು, ಪ್ರಮುಖರು ಉಪಸ್ಥಿತರಿದ್ದರು.

ಗೋಕುಲದ ಶ್ರೀ ಮಾರುತಿ ಯುವಕ ಮಂಡಳದಲ್ಲಿ ಅಧ್ಯಕ್ಷ ಹನುಮಂತ ಉಣಕಲ್ ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ಮಹಾದೇವಪ್ಪ ಪೂಜಾರ, ಬಸಪ್ಪ ಎಲಿಗಾರ, ಮಂಡಳದ ನಿರ್ದೇಶಕರು, ಯುವಕರು, ಇತರರು ಉಪಸ್ಥಿತರಿದ್ದರು.

ನವನಗರದಲ್ಲಿ: ನವನಗರದ ಜೈ ಕರ್ನಾಟಕ ಯುವಕ ಮಂಡಳ ವತಿಯಿಂದ ಕರ್ನಾಟಕ ವೃತ್ತದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಸಮೀಉಲ್ಲಾಖಾನ್, ಪಾಲಿಕೆ ಸದಸ್ಯೆ ಸುನೀತಾ ಮಾಳವದಕರ ಹಾಗೂ ನವನಗರ ವೀರಶೈವ ಸಂಘಟನಾ ಸಮಿತಿ ಕಾರ್ಯದರ್ಶಿ ಸಂಗಮೇಶ ಹೊರಗಿನಮಠ ಧ್ವಜಾರೋಹಣ ನೆರವೇರಿಸಿದರು.

ಯುವಕ ಮಂಡಳ ಅಧ್ಯಕ್ಷ ಸ್ವಾಮಿ ಮಹಾಜನಶೆಟ್ಟರ್, ಸದಸ್ಯರಾದ ಭೀಮಪ್ಪ ಜಾವೂರ, ಕಿರಣ ನಾವಳ್ಳಿ, ಶಿವು ಮನಗುಂಡಿ, ಶಿವು ಶಿರವಾಳ, ಸುಭಾಸ ಜಂಗಳ, ಶರದ್ ಮುದಕವಿ, ವಿಜಯಲಕ್ಷ್ಮೀ ದೊಡ್ಡಮನಿ, ನವನಗರ ನಿವಾಸಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಭಗತಸಿಂಗ್ ಸೇವಾ ಸಮಿತಿ: ನಗರದಲ್ಲಿ ಭಗತ್ ಸಿಂಗ್ ಸೇವಾ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಶಶಿಶೇಖರ ಡಂಗನಗರ ನೆರವೇರಿಸಿದರು.

ವೀರನಗೌಡ ಪಾಟೀಲ, ಮಹೇಶ ಜಕಾತಿ, ರಾಜು ಅಗಸರ, ವೀರೇಶ ಕೆಸರಪ್ಪನವರ, ಬಸವರಾಜ ಹಿತ್ತಲಮನಿ, ಶಂಕರ ಶೀಲವಂತಮಠ, ಧಿರೇಂದ್ರ ಬಾಗಲಕೋಟಿ, ಸೂರಜ ಅವರಾದಿ, ಅನೂಪ ಕದಂ, ಮಂಜು ಹಾನಗಲ್, ಪ್ರಶಾಂತ ಕಲ್ಲೂರ, ಮಹೇಂದ್ರ ಕುಬಿಹಾಳ, ಶಿವು, ಪುನೀತ ಅಡಗಲ, ವಿಘ್ನೇಶ್ವರ ಶಾಲೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರೇವಡಿಹಾಳದಲ್ಲಿ: ರೇವಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಶತಾಯುಷಿ ಮಾದೇವಪ್ಪ ಮಾನೆ ನೆರವೇರಿಸಿದರು. ಗ್ರಾಮದ ಗುರುಹಿರಿಯರು ಹಾಗೂ ಯುವಕರು ಮತ್ತು ಶಿಕ್ಷಕರು, ಗ್ರಾಮ ಪಂಚಾಯತ ಅಧ್ಯಕ್ಷರು, ಸದ್ಯಸರು ಉಪಸ್ಥಿತರಿದ್ದರು.