ಜಿಲ್ಲೆ

ನವನಗರ ರೋಟರಿ ಪದಾಧಿಕಾರಿಗಳ ಆಯ್ಕೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರ ರೋಟರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

2024-25ರಿಂದ 2026-27ರ ವರೆಗೆ ಮೂರು ವರ್ಷದ ಅವಧಿಗಾಗಿ ಆಡಳಿತ ಮಂಡಳಿ ರಚನೆಗೆ ಜರುಗಿದ ಚುನಾವಣೆಯಲ್ಲಿ ಡಾ. ಬಿ.ಎಸ್. ಪಾಟೀಲ ಅಧ್ಯಕ್ಷ, ಎಸ್.ವಿ. ಶಿರಗುಪ್ಪಿ, ಎಸ್.ಜಿ. ಮಾಳಾಪುರ ಉಪಾಧ್ಯಕ್ಷರು, ಡಾ. ಕೆ.ಪಿ. ಅಣ್ಣಿಗೇರಿ ಕಾರ್ಯದರ್ಶಿ, ಜಿ.ಬಿ. ಹಿರೇಮಠ ಜಂಟಿ ಕಾರ್ಯದರ್ಶಿ, ಎಂ.ಎಫ್. ಮನಗುಂಡಿ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಡಾ. ಎ.ಸಿ. ಡೇಕಾ, ಜಿ.ಜಿ. ಹೆಗಡೆ, ಆರ್.ಎಚ್. ರಿತ್ತಿ, ಗಿರೀಶ ಬೊಮ್ಮನಗೌಡರ, ಶಶಿಕಾಂತ ಮಾಳಾಪುರ, ಡಾ. ಎ.ಎಸ್. ಅಕ್ಕಮಹಾದೇವಿ, ಅರುಣ ಹಕ್ಕಾಪಕ್ಕಿ, ಡಾ. ಎನ್.ವಿ. ಸಾನು, ಎಸ್.ಜಿ. ತೆಂಗಿನಕಾಯಿ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.