ಹುಬ್ಬಳ್ಳಿ: ಇಲ್ಲಿಯ ನವನಗರದ ಶಿವರಾತ್ರಿ ಜಾಗರಣೋತ್ಸವ ಸಮಿತಿ ವತಿಯಿಂದ ವಿಶ್ವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಸೆ. 1ರಂದು ಮೈಲಾರಲಿಂಗೇಶ್ವರನಿಗೆ ಅಭಿಷೇಕ, ಭಂಡಾರ ಅರ್ಚನೆ ಹಾಗೂ ಮಾಲಸಾಂಬಾ ದೇವಿಗೆ ಕುಂಕುಮಾರ್ಚನೆಯನ್ನು ಹಮ್ಮಿಕೊಳ್ಳಲಾಗಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿ ಅಧ್ಯಕ್ಷ ಆರ್.ಎಸ್. ಕುಲಕರ್ಣಿ ತಿಳಿಸಿದ್ದಾರೆ.