ಜಿಲ್ಲೆ

ನವನಗರದಲ್ಲಿ 44ನೇ ವರ್ಷದ ಸಂಭ್ರಮಾಚರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನವನಗರ ಗಣೇಶೋತ್ಸವ ಮಂಡಳಿಯವರು ಆಚರಿಸುತ್ತ ಬಂದಿರುವ ಗಣೇಶೋತ್ಸವಕ್ಕೆ ಇದೀಗ 44ನೇ ವರ್ಷದ ಸಂಭ್ರಮ.

ಏಳು ದಿನಗಳವರೆಗೆ ಶ್ರೀಗಣೇಶನನ್ನು ಪ್ರತಿಷ್ಠಾಪಿಸಿ, ನಿತ್ಯವೂ ಒಂದೊಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಉತ್ಸವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತ ಬರಲಾಗಿದೆ.

ಈ ವರ್ಷ ವೇದವ್ಯಾಸರು ಬೋಧಿಸುತ್ತಿರುವ ಮಹಾಭಾರತವನ್ನು ಆಲಿಸಿ ಬರೆಯುತ್ತಿರುವ ಮಹಾಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಮಂಗಳವಾರ ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸೆ. 20ರಂದು ಸಂಜೆ 6.15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಎರಡೆತ್ತಿನಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಾಲಿಕೆ ಸದಸ್ಯ ಮಂಜುನಾಥ ಬುರ್ಲಿ ಉದ್ಘಾಟಿಸುವರು. ನಿತ್ಯ ಸಂಜೆ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ.

ಸೆ. 24ರಂದು ಬೆಳಗ್ಗೆ 9.15ಕ್ಕೆ ಅಪೋಲೋ ಚರ್ಮದಿಂದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಶ್ರೀ ಸತ್ಯನಾರಾಯಣ ಪೂಜೆ, ಗಣಹೋಮ, ಸಂಜೆ 7ಕ್ಕೆ ಅನ್ನಸಂತರ್ಪಣೆ, ಸಂಗೀತ ಸಂಜೆ ಆಯೋಜಿಸಲಾಗಿದೆ.

ಸೆ. 25ರಂದು ಸಂಜೆ 4ಕ್ಕೆ ಭವ್ಯ ಮೆರವಣಿಗೆ ಮೂಲಕ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.