ಜಿಲ್ಲೆ

ಖನ್ನೂರಲ್ಲಿ ಬನಶಂಕರಿ ಜಾತ್ರೆ

Dharwada - Basavaraj Idli

ಹುಬ್ಬಳ್ಳಿ: ನವಲಗುಂದ ತಾಲೂಕಿನ ಖನ್ನೂರ ಗ್ರಾಮದ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಮೇ 12ರಂದು ನಡೆಯಲಿದ್ದು, ಇದರ ಅಂಗವಾಗಿ ಸಾಮೂಹಿಕ ವಿವಾಹ, ಧರ್ಮಸಭೆ ಹಮ್ಮಿಕೊಳ್ಳಲಾಗಿದೆ.

ನರಗುಂದ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಧಾರ್ಮಿಕ ಹಾಗೂ ಸಾಮೂಹಿಕ ವಿವಾಹ ಜರುಗಲಿವೆ. ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗ್ಗೆ 6.30ಕ್ಕೆ ಮಹಾಮಸ್ತಕಾಭಿಷೇಕ, 11ಕ್ಕೆ ಸಾಮೂಹಿಕ ವಿವಾಹ, 12ಕ್ಕೆ ಶ್ರೀದೇವಿ ಪಲ್ಲಕ್ಕಿ ಉತ್ಸವ ಜತೆಗೆ ನವ ವಿವಾಹಿತರ ಮೆರವಣಿಗೆ ಹಾಗೂ ಮಹಾಪ್ರಸಾದ ಜರುಗಲಿದೆ.

ಸಂಜೆ 7ಕ್ಕೆ ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಅಣ್ಣಿಗೇರಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದೇವರಾಜ ದಾಡಿಭಾವಿ, ಕೆಪಿಸಿಸಿ ಸದಸ್ಯರಾದ ವಿನೋದ ಅಸೂಟಿ, ವಿಜಯ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜಂಬುನಾಥ ಮಜ್ಜಗಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.